ಕೋವಿಡ್ ಸೋಂಕಿನ ನಿಯಂತ್ರಣಕ್ಕೆಂದು ಹೇರಲಾಗಿದ್ದ ನಿರ್ಬಂಧಗಳ ಉಲ್ಲಂಘನೆ ಮಾಡಿದ ಕಾರಣಕ್ಕೆ ಜುಲೈ ತಿಂಗಳಲ್ಲಿ ಸಾರ್ವಜನಿಕರಿಂದ ದೆಹಲಿ ಪೊಲೀಸರು ಸಂಗ್ರಹಿಸಿದ ದಂಡದ ಮೊತ್ತವು 36.2 ಕೋಟಿ ರೂಪಾಯಿಗಳಾಗಿವೆ.
ಜೂನ್ ತಿಂಗಳಲ್ಲಿ ಇದೇ ವಿಚಾರದಲ್ಲಿ ಸಂಗ್ರಹಿಸಿದ ದಂಡದ ಮೊತ್ತವಾದ 25 ಕೋಟಿ ರೂಪಾಯಿಗಳಿಗಿಂತ 11 ಕೋಟಿ ರೂಪಾಯಿಗಳನ್ನು ಕಳೆದ ತಿಂಗಳು ಹೆಚ್ಚಾಗಿ ಸಂಗ್ರಹಿಸಲಾಗಿದೆ. ಮೇನಲ್ಲಿ ದಂಡದ ರೂಪದಲ್ಲಿ 15.1 ಕೋಟಿ ರೂಪಾಯಿಗಳು ಸಂಗ್ರಹವಾಗಿತ್ತು.
ಸಾಂಕ್ರಮಿಕ ಸಂಬಂಧ ಹಮ್ಮಿಕೊಳ್ಳಲಾಗಿದ್ದ ಸಭೆಯೊಂದರ ವೇಳೆ ಹಂತಹಂತವಾಗಿ ಆರ್ಥಿಕ ಚಟುವಟಿಕೆಗಳನ್ನು ಮರಳಿ ಆರಂಭಿಸಲು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಅನುಮತಿ ಕೊಟ್ಟಿತ್ತು.
ಕೊಹ್ಲಿ ಬಾಯ್ಸ್ ಗೆಲುವಿನ ಆಸೆಗೆ ತಣ್ಣೀರೆರಚಿದ ಮಳೆರಾಯ
ಜುಲೈ 26ರಿಂದ ಪೂರ್ಣ ಸಾಮರ್ಥ್ಯದಲ್ಲಿ ದೆಹಲಿ ಮೆಟ್ರೋ ಚಾಲನೆ, ಅರ್ಧ ಸಾಮರ್ಥ್ಯದಲ್ಲಿ ಸಿನೆಮಾ ಹಾಲ್‌ಗಳು, ಥಿಯೇಟರ್‌ಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳನ್ನು ಕಾರ್ಯಾರಂಭ ಮಾಡಲು ಇದೇ ವೇಳೆ ಅನುಮತಿ ನೀಡಲಾಗಿದೆ.
ದಂಡ ವಿಧಿಸಿ ವಿತರಿಸಲಾದ 2,00,691 ಚಲನ್‌ಗಳ ಪೈಕಿ ಮಾಸ್ಕ್ ಹಾಕದೇ ಇದ್ದ ಕಾರಣಕ್ಕೆ 1,69,659 ಚಲನ್‌ಗಳು, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇದ್ದ ಕಾರಣಕ್ಕೆ 26,744 ಚಲನ್‌ಗಳು ಮದ್ಯ/ಗುಟ್ಖಾ/ಪಾನ್ ಸೇವನೆ ಮಾಡಿದ್ದಕ್ಕೆ 1,842 ಚಲನ್‌ಗಳು ಹಾಗೂ ದೊಡ್ಡ ಮಟ್ಟದಲ್ಲಿ ಸಾರ್ವಜನಿಕ ಸಭೆ ಸೇರಿಸಿದ್ದಕ್ಕೆ 884 ಚಲನ್‌ಗಳನ್ನು ಹರಿದು ಕೊಡಲಾಗಿದೆ.