ಕೊರೊನಾ 2ನೇ ಅಲೆಯಲ್ಲಿ ತೀವ್ರ ಹೊಡೆತ ತಿಂದಿದ್ದ ರಾಷ್ಟ್ರ ರಾಜಧಾನಿ ದೆಹಲಿಯು ಶನಿವಾರ ಶೂನ್ಯ ಕೊರೊನಾ ಸಾವಿನ ಕೇಸುಗಳನ್ನು ದಾಖಲಿಸಿದೆ. ಈ ಮೂಲಕ ಸತತ ಎರಡನೇ ದಿನವೂ ದೆಹಲಿ ಶೂನ್ಯ ಕೊರೊನಾ ಸಾವಿನ ಸಂಖ್ಯೆ ವರದಿಯಾದಂತಾಗಿದೆ. ಇದು ಮಾತ್ರವಲ್ಲದೇ ಕಳೆದ ವರ್ಷ ಏಪ್ರಿಲ್ 15ನ್ನು ಹೊರತುಪಡಿಸಿ ಇದೇ ಮೊದಲ ಬಾರಿಗೆ ದೆಹಲಿ ಕಡಿಮೆ ಕೋವಿಡ್ ಕೇಸುಗಳನ್ನು ದಾಖಲಿಸಿದಂತಾಗಿದೆ.
ಕೊರೊನಾ ಎರಡನೆ ಅಲೆ ಆರಂಭವಾದ ಬಳಿಕ ದೆಹಲಿಯು 12ನೇ ಬಾರಿಗೆ ಶೂನ್ಯ ಕೊರೊನಾ ಸಾವಿನ ಪ್ರಕರಣಗಳನ್ನು ದಾಖಲಿಸಿದಂತಾಗಿದೆ.
ಜುಲೈ 18, ಜುಲೈ 24, ಜುಲೈ 29, ಆಗಸ್ಟ್2, ಆಗಸ್ಟ್4, ಆಗಸ್ಟ್8, ಆಗಸ್ಟ್11, ಆಗಸ್ಟ್12, ಆಗಸ್ಟ್13, ಆಗಸ್ಟ್ 16 ಹಾಗೂ ಆಗಸ್ಟ್ 20ರಂದು ದೆಹಲಿಯು ಕೊರೊನಾ ಸಾವಿನ ಸಂಖ್ಯೆಯಲ್ಲಿ ಶೂನ್ಯ ದಾಖಲಿಸಿದೆ.