alex Certify ದೇಶದಲ್ಲಿ ಕೋವಿಡ್​ ಲಸಿಕೆ ಅಭಾವ ತಪ್ಪಿಸಲು ಕೇಂದ್ರ ಸರ್ಕಾರದಿಂದ ಹೊಸ ಮಾಸ್ಟರ್​ ಪ್ಲಾನ್..​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶದಲ್ಲಿ ಕೋವಿಡ್​ ಲಸಿಕೆ ಅಭಾವ ತಪ್ಪಿಸಲು ಕೇಂದ್ರ ಸರ್ಕಾರದಿಂದ ಹೊಸ ಮಾಸ್ಟರ್​ ಪ್ಲಾನ್..​..!

24 ಗಂಟೆ ಅವಧಿಯಲ್ಲಿ ಅತೀ ಹೆಚ್ಚು ಕೊರೊನಾ ಲಸಿಕೆಯನ್ನು ನೀಡಿದ ವಿಶ್ವದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದ ಬೆನ್ನಲ್ಲೇ ಇದೀಗ ಕೇಂದ್ರ ಸರ್ಕಾರ ತಿಂಗಳಿಗೆ 25 ಡೋಸ್​ ಲಸಿಕೆ ಉತ್ಪಾದನೆ ಮಾಡಲು ಪ್ಲಾನ್​ ಮಾಡಿದೆ ಎಂಬ ಮಾಹಿತಿಯು ಉನ್ನತ ಮೂಲಗಳಿಂದ ದೊರಕಿದೆ.

ಈ ತಿಂಗಳಲ್ಲಿ ಭಾರತವು 20 ಕೋಟಿ ಕೋವಿಶೀಲ್ಡ್​ ಡೋಸ್​ ಹಾಗೂ 3.5 ಕೋಟಿ ಕೋವ್ಯಾಕ್ಸಿನ್​ ಡೋಸ್​​ನ್ನು ಪಡೆಯಲಿದೆ. ಪ್ರತಿ ತಿಂಗಳು 25 ಕೋಟಿ ಲಸಿಕೆಯನ್ನು ಹೊಂದುವ ಗುರಿಯನ್ನು ಇಟ್ಟುಕೊಂಡಿದ್ದೇವೆ ಎಂದು ಮೂಲಗಳು ತಿಳಿಸಿವೆ.

ಈ ವರ್ಷದ ಅಂತ್ಯದ ಒಳಗಾಗಿ ದೇಶದ 135 ಕೋಟಿ ಜನತೆಗೆ ಕನಿಷ್ಟ 1 ಡೋಸ್​ ಲಸಿಕೆಯನ್ನಾದರೂ ಪೂರ್ಣಗೊಳಸಬೇಕೆಂಬ ಪ್ರಧಾನಿ ಮೋದಿಯವರ ಗುರಿಗೆ ಪೂರಕವಾಗಿ ಈ ಯೋಜನೆಯನ್ನು ಮಾಡಲಾಗಿದೆ ಎನ್ನಲಾಗಿದೆ.

ಅಲ್ಲದೇ ಕೊರೊನಾ ಮೂರನೇ ಅಲೆ ಕೂಡ ಸಮೀಪದಲ್ಲೇ ಇರುವುದರಿಂದ ಕೋವಿಡ್​ ಲಸಿಕಾ ಅಭಿಯಾನಕ್ಕೆ ಚುರುಕು ಮುಟ್ಟಿಸುವ ಪ್ರಯತ್ನ ಕೂಡ ನಡೆಯುತ್ತಿದೆ.

ಪ್ರಧಾನಿ ಮೋದಿ 71ನೇ ಜನ್ಮದಿನದ ಪ್ರಯುಕ್ತ ಶುಕ್ರವಾರ ದೇಶದಲ್ಲಿ 2.50 ಕೋಟಿ ಡೋಸ್​ ಕೋವಿಡ್​ ಲಸಿಕೆಯನ್ನು ನೀಡಲಾಗಿದೆ. ಇದು ವಿಶ್ವದಲ್ಲಿ ಯಾವುದೇ ರಾಷ್ಟ್ರವೂ ಮಾಡಿರದ ಸಾಧನೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...