alex Certify ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆಗೆ ದರ ನಿಗದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆಗೆ ದರ ನಿಗದಿ

ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್​ 19 ಲಸಿಕೆಗಳಿಗೆ ತೆಗೆದುಕೊಳ್ಳಬೇಕಾದ ಬೆಲೆಯನ್ನ ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ನಿರ್ಧರಿಸಿದೆ.

ಕೇಂದ್ರ ಆರೋಗ್ಯ ಸಚಿವಾಲಯ ಮಾಡಿರುವ ಘೋಷಣೆಯ ಪ್ರಕಾರ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್​ಗಳ ಬೆಲೆಯನ್ನ ತಲಾ 780 ರೂ. ಹಾಗೂ 1410 ರೂಪಾಯಿಗಳಿಗೆ ನಿಗದಿ ಮಾಡಿಲಾಗಿದೆ. ಹಾಗೂ ರಷ್ಯಾದ ಸ್ಪುಟ್ನಿಕ್​ ವಿ ಲಸಿಕೆಯ ಬೆಲೆ 1145 ರೂಪಾಯಿ ಆಗಿದೆ.

ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಟ್ವಿಟರ್​ನಲ್ಲಿ ಮಾಹಿತಿ ಹೊರಡಿಸಿದೆ. ಈ ಟ್ವಿಟರ್​ನಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಶೀಲ್ಡ್​ ಬೆಲೆ 780 ರೂ., ಕೊವ್ಯಾಕ್ಸಿನ್​ ಬೆಲೆ 1410 ರೂಪಾಯಿ ಹಾಗೂ ಸ್ಪುಟ್ನಿಕ್​ ವಿ ಲಸಿಕೆಗೆ 1145 ರೂಪಾಯಿಗಳನ್ನ ಮಾತ್ರ ತೆಗೆದುಕೊಳ್ಳತಕ್ಕದ್ದು ಎಂದು ಹೇಳಿದೆ.

ಕೇಂದ್ರ ಸರ್ಕಾರ 25 ಕೋಟಿ ಡೋಸ್​ ಕೋವಿಶೀಲ್ಡ್ ಲಸಿಕೆ ಹಾಗೂ 19 ಕೋಟಿ ಡೋಸ್​ ಕೊವ್ಯಾಕ್ಸಿನ್​ ಲಸಿಕೆಗಳಿಗೆ ಆರ್ಡರ್​ ಮಾಡಿದ ಬಳಿಕ ಕೇಂದ್ರ ಆರೋಗ್ಯ ಸಚಿವಾಲಯ ಈ ಘೋಷಣೆ ಮಾಡಿದೆ. ಈ 44 ಕೋಟಿ ಡೋಸ್​​ ಲಸಿಕೆಗಳು ಡಿಸೆಂಬರ್​​ ತಿಂಗಳವರೆಗೆ ಲಭ್ಯವಿರಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...