alex Certify ಮಾಸ್ಕ್​​ನಿಂದ ಮುಕ್ತಿ ನೀಡಿದ್ದ ಅಮೆರಿಕಕ್ಕೆ ‘ಡೆಲ್ಟಾ’ ಶಾಕ್​: ಮಾರ್ಗಸೂಚಿಯಲ್ಲಿ ಬದಲಾವಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಸ್ಕ್​​ನಿಂದ ಮುಕ್ತಿ ನೀಡಿದ್ದ ಅಮೆರಿಕಕ್ಕೆ ‘ಡೆಲ್ಟಾ’ ಶಾಕ್​: ಮಾರ್ಗಸೂಚಿಯಲ್ಲಿ ಬದಲಾವಣೆ

ಹೆಚ್ಚುತ್ತಿರುವ ಕೊರೊನಾ ಪ್ರಕರಣ ಹಿನ್ನೆಲೆಯಲ್ಲಿ ಸಂಪೂರ್ಣ ಲಸಿಕೆ ಪಡೆದವರಿಗೆ ಮಾಸ್ಕ್​​ನಿಂದ ಮುಕ್ತಿ ನೀಡಿದ್ದ ಆದೇಶವನ್ನ ಅಮೆರಿಕ ವಾಪಸ್​ ಪಡೆದಿದೆ. ಈ ಸಂಬಂಧ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದ್ದು ಅಪಾಯವಿರುವ ಪ್ರದೇಶಗಳಲ್ಲಿ ಎಲ್ಲರೂ ಮಾಸ್ಕ್​​ ಧರಿಸುವುದು ಸೂಕ್ತ ಎಂದು ಶಿಫಾರಸು ಮಾಡಲಾಗಿದೆ.

ಡೆಲ್ಟಾ ರೂಪಾಂತರಿಯಿಂದ ಹೆಚ್ಚು ಜಾಗರೂಕರಾಗಿರಬೇಕಾದ ಈ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್​ ಬಳಕೆ ಮಾಡುವುದು ಹೆಚ್ಚು ಸೂಕ್ತವಾಗಿದೆ ಎಂದು ಅಮೆರಿಕದ ರೋಗ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಕೇಂದ್ರವು ಹೊಸ ಮಾರ್ಗಸೂಚಿಯಲ್ಲಿ ಹೇಳಿದೆ.

2 ತಿಂಗಳ ಹಿಂದೆ ಅಂದರೆ ಮೇ 13ರಂದು ಅಮೆರಿಕದ ರೋಗ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಕೇಂದ್ರವು ಕೊರೊನಾ ಲಸಿಕೆಯ ಎರಡೂ ಡೋಸ್​ ಸ್ವೀಕರಿಸಿದವರು ಫೇಸ್​ ಮಾಸ್ಕ್​ ಧರಿಸುವ ಅವಶ್ಯಕತೆ ಇಲ್ಲ ಎಂದು ಹೇಳಿತ್ತು.

ಆ ಸಂದರ್ಭದಲ್ಲಿ ಆಲ್ಫಾ ರೂಪಾಂತರಿಗಳು ನಿಯಂತ್ರಣಕ್ಕೆ ಬಂದಿದ್ದವು. ಅಲ್ಲದೇ ಈ ರೂಪಾಂತರಿಗಳು ಡೆಲ್ಟಾದಷ್ಟು ವ್ಯಾಪಕವಾಗಿ ಹರಡುತ್ತಲೂ ಇರಲಿಲ್ಲ. ಆದರೆ ಇದೀಗ ಡೆಲ್ಟಾ ರೂಪಾಂತರಿ ಅಮೆರಿಕಕ್ಕೆ ಕಾಲಿಟ್ಟಿದ್ದು ವ್ಯಾಪಕವಾಗಿ ಹರಡುತ್ತಿದೆ ಎನ್ನಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...