ರಾಜಸ್ತಾನದಲ್ಲಿ ಒಮಿಕ್ರಾನ್ ಭೀತಿ ಹೆಚ್ಚುತ್ತಲೆ ಇದೆ. ರಾಜಸ್ತಾನದ ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ 21 ಒಮಿಕ್ರಾನ್ ಕೇಸ್ ಗಳು ಪಾಸಿಟಿವ್ ಬಂದಿದ್ದು, ಈ ಮೂಲಕ ರಾಜ್ಯದ ಒಮಿಕ್ರಾನ್ ಸೋಂಕಿತರ ಸಂಖ್ಯೆ 43ಕ್ಕೇರಿದೆ. ಜೈಪುರದ 11, ಅಜ್ಮೀರದ 6, ಉದಯಪುರದ 3 ಹಾಗೂ ಮಹಾರಾಷ್ಟ್ರ 1 ಸೇರಿ ಒಟ್ಟು 21 ಒಮಿಕ್ರಾನ್ ಕೇಸ್ ಗಳು ಪತ್ತೆಯಾಗಿವೆ.
BIG BREAKING: ನಾಳೆ ಬೆಳಗ್ಗೆಯೇ ಹೈವೋಲ್ಟೇಜ್ ಮೀಟಿಂಗ್, ರಾಜ್ಯದಲ್ಲಿ ಮತ್ತೆ ನೈಟ್ ಕರ್ಫ್ಯೂ ಜಾರಿ…?
ಈ 21 ಸೋಂಕಿತರಲ್ಲಿ ಐವರಿಗೆ ವಿದೇಶ ಪ್ರಯಾಣದ ಇತಿಹಾಸವಿದ್ದು, ಮೂವರು ಇವರ ಸಂಪರ್ಕದಲ್ಲಿದ್ದವರು. ಇನ್ನುಳಿದ ಮೂವರು ಈ ಮೊದಲೆ ಒಮಿಕ್ರಾನ್ ಪಾಸಿಟಿವ್ ಬಂದಿದ್ದವರ ಸಂಪರ್ಕದಲ್ಲಿದ್ದವರು. ರಾಜ್ಯದ ಒಟ್ಟು 43 ಪ್ರಕರಣಗಳಲ್ಲಿ 28 ಜೈಪುರದಲ್ಲೆ ಪತ್ತೆಯಾಗಿರುವುದು ಆತಂಕಕ್ಕೀಡು ಮಾಡಿದೆ. ಈ ಹಿಂದೆ 27 ವರ್ಷದ ಕೀನ್ಯಾದ ಮಹಿಳೆಯೊಬ್ಬರಲ್ಲಿ ಒಮಿಕ್ರಾನ್ ಪತ್ತೆಯಾಗಿತ್ತು, ಆನಂತರ ಒಂದೇ ಕುಟುಂಬದ ಒಂಭತ್ತು ಜನರಿಗೆ ಒಮಿಕ್ರಾನ್ ವಕ್ಕರಿಸಿತ್ತು. ಸಧ್ಯ ಈ ಕುಟುಂಬ ಹಾಗೂ ಕೀನ್ಯಾದ ಮಹಿಳೆ ಸೇರಿ ಹತ್ತು ಜನರ ವರದಿ ನೆಗೆಟಿವ್ ಬಂದಿದ್ದು ಅವರನ್ನ ಮನೆಗೆ ಕಳುಹಿಸಲಾಗಿದೆ.