ಜಗತ್ತಿನಾದ್ಯಂತ ಇರುವ ಅತ್ಯಂತ ಸಾಮಾನ್ಯ ಕಾಯಿಲೆಗಳಲ್ಲಿ ಒಂದಾದ ಮಧುಮೇಹದಿಂದಾಗಿ ಕೋಟ್ಯಂತರ ಜನರು ನರಳುತ್ತಿದ್ದಾರೆ. ಕೋವಿಡ್ ಸೋಂಕಿನಿಂದಾಗಿ ಡಯಾಬಿಟಿಸ್ ರೋಗಿಗಳಲ್ಲಿ ಇನ್ನಷ್ಟು ಸವಾಲುಗಳು ಕಾಣಿಸಿಕೊಳ್ಳಲಿವೆ ಎಂದು ನೇಚರ್ ಮೆಟಬಾಲಿಸಂ ಎಂಬ ನಿಯತಕಾಲಿಕೆಯೊಂದರಲ್ಲಿ ಅಧ್ಯಯನ ವರದಿಯೊಂದನ್ನು ಪ್ರಕಟಿಸಲಾಗಿದೆ.
ಕೋವಿಡ್ ಸೋಂಕಿತ 551 ಮಂದಿ ಡಯಾಬಿಟಿಸ್ ರೋಗಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇವರಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣದಲ್ಲಿ ಕೋವಿಡ್‌ನಿಂದಾಗಿ ಏರಿಕೆ ಕಂಡು ಬಂದಿರುವುದು ತಿಳಿದು ಬಂದಿದೆ. ಇದೇ ವಿಚಾರವಾಗಿ ’ಸೈನ್ಸ್ ಇನ್ 5’ ಸರಣಿಯಲ್ಲಿ ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್ ಸಂಕಷ್ಟ ಕಾಲದಲ್ಲಿ ಮಧುಮೇಹದ ವಿರುದ್ಧ ಹೋರಾಡುವುದು ಹೇಗೆಂದು ತಿಳಿಸಿದೆ.
ಎದೆ ನಡುಗಿಸುವಂತಿದೆ ಭೂಕುಸಿತದ ದೃಶ್ಯ
ಬೋಸ್ಟನ್ ಮಕ್ಕಳ ಆಸ್ಪತ್ರೆಯಲ್ಲಿ ನೆಫ್ರಾಲಜಿಯಲ್ಲಿ ಪಿಎಚ್‌ಡಿ ಮಾಡಿರುವ ಪಾವೊಲೋ ಫಿಯೋರಿನಾ ಈ ಅಧ್ಯಯನ ರುವಾರಿಯಾಗಿದ್ದಾರೆ. “ಈ 551 ಮಂದಿ ಕೋವಿಡ್ ಸೋಂಕಿಗೆ ಒಳಗಾಗುವ ಮುನ್ನ ಡಯಾಬೆಟಿಕ್ ಆಗಿರಲಿಲ್ಲ. ಆದರೆ, 46% ಮಂದಿಯಲ್ಲಿ ಹೊಸದಾಗಿ ಸಕ್ಕರೆ ಅಂಶ ಹೆಚ್ಚಾಗಿರುವುದು (ಹೈಪರ್‌ಗ್ಲಿಸೆಮಿಯಾ) ಕಂಡು ಬಂದಿದೆ. ಕೋವಿಡ್-19ನಿಂದ ಪ್ಯಾಂಕ್ರಿಯಾಸ್ ಮೇಲೆ ನೇರ ಪರಿಣಾಮವಾಗಲಿದೆ ಎಂದು ತೋರಲು ಈ ಅಧ್ಯಯನ ಮೊದಲ ಯತ್ನಗಳಲ್ಲಿ ಒಂದಾಗಿದೆ. ಕೋವಿಡ್ ಸೋಂಕಿತರಲ್ಲಿ ವೈರಸ್‌ಗಳು ಪ್ಯಾಂಕ್ರಿಯಾಸ್ ಅನ್ನೂ ಗುರಿಯಾಗಿಸಿ ದಾಳಿ ಮಾಡುವ ಸಾಧ್ಯತೆ ಇದ್ದು, ಇದರಿಂದಾಗಿ ಸುದೀರ್ಘಾವಧಿಯ ಆರೋಗ್ಯದ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ,” ಎಂದು ಈಕೆ ತಿಳಿಸಿದ್ದಾರೆ.
ಕೋವಿಡ್-19ನಿಂದಾಗಿ ಡಯಾಬೆಟಿಕ್ ಮಂದಿಯ ಸಂಖ್ಯೆಯಲ್ಲಿ ದೊಡ್ಡ ಮಟ್ಟದ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಫಿಯೋರಿನಾ ತಿಳಿಸಿದ್ದಾರೆ.