ಆಗ್ರಾದಲ್ಲಿ ಕೋವಿಡ್ 19ನಿಂದ ಗುಣಮುಖರಾದ ಡಜನ್ಗೂ ಅಧಿಕ ಪುರುಷರ ಮೇಲೆ ನಡೆಸಲಾದ ಅಧ್ಯಯನದಲ್ಲಿ ಸಂತಾನೋತ್ಪತ್ತಿ ಮೇಲೆ ಡೆಡ್ಲಿ ವೈರಸ್ ಗಂಭೀರ ಪರಿಣಾಮ ಬೀರಿದೆ ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
ಪ್ರತಿಷ್ಟಿತ ಐವಿಎಫ್ ಸಂಸ್ಥೆಯೊಂದು ನಡೆಸಿದ ಅಧ್ಯಯನದಲ್ಲಿ ಸಾಮಾನ್ಯ ಪುರುಷನಿಗೆ ಹೋಲಿಸಿದ್ರೆ ಕೋವಿಡ್ 19 ರೋಗಿಗಳಲ್ಲಿ ವೀರ್ಯಾಣು ಗುಣಮಟ್ಟದಲ್ಲಿ ಇಳಿಕೆ ಕಂಡುಬಂದಿದೆ. ಕೊರೊನಾ ಸೋಂಕು ಕಾಣಿಸಿಕೊಂಡ 60 ದಿನಗಳ ಬಳಿಕವೂ ಪುರುಷರ ವೀರ್ಯಾಣು ಸಂಖ್ಯೆ ಕಡಿಮೆಯಾಗಿದೆ ಎಂದು ತಿಳಿದುಬಂದಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಹಿರಿಯ ವೈದ್ಯಾಧಿಕಾರಿ, ಕೊರೊನಾ ಸೋಂಕು ಲ್ಯುಟೈನೈಜಿಂಗ್ ಹಾರ್ಮೋನ್ಗಳನ್ನ ಉತ್ತೇಜಿಸಿದೆ ಹಾಗೂ ಟೆಸ್ಟೋಸ್ಟಿರಾನ್ ಸಂಖ್ಯೆಯನ್ನು ಕಡಿಮೆ ಮಾಡಿದೆ ಎಂದು ಹೇಳಿದ್ದಾರೆ.
ಈ ಅಧ್ಯಯನದಿಂದ ನಮಗೆ ಕೋವಿಡ್ ಸೋಂಕು ಪುರುಷರ ವೀರ್ಯಾಣು ಮೇಲೆ ಪ್ರತಿಕೂಲ ಪರಿಣಾಮ ಬೀರಬಲ್ಲದು ಎಂಬ ಆಘಾತಕಾರಿ ಅಂಶ ತಿಳಿದುಬಂದಿದೆ. ಅಲ್ಲದೇ ಸಾಮಾನ್ಯ ಪುರುಷನಲ್ಲಿ ಉತ್ಪತ್ತಿಯಾಗುವ ವೀರ್ಯವು 50 ಪ್ರತಿಶತ ಕಡಿಮೆ ಆಗುತ್ತದೆ ಎಂದು ಡಾ. ಎಸ್.ಕೆ. ಕಲ್ರಾ ಹೇಳಿದ್ದಾರೆ.