ಕೊರೊನಾ ವೈರಸ್ ಮತ್ತೆ ಹೆಚ್ಚಾಗ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡಿರುವ ಭಾರತ, ಇದ್ರ ನಿಯಂತ್ರಣಕ್ಕೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ತಿದೆ. ಈಗ ಅಂತರಾಷ್ಟ್ರೀಯ ಪ್ರಯಾಣಿಕರ ಮಾರ್ಗಸೂಚಿಯನ್ನು ನವೀಕರಿಸಿದೆ. ಹೊಸ ಎಸ್ಒಪಿ ಫೆಬ್ರವರಿ 22ರಿಂದ ಜಾರಿಗೆ ಬರಲಿದೆ.
ಲಸಿಕೆಗಾಗಿ ಹಿಮದ ನಡುವೆ ಆರು ಮೈಲಿ ನಡೆದುಹೋದ 90 ರ ಮಹಿಳೆ
ಯುನೈಟೆಡ್ ಕಿಂಗ್‌ಡಮ್, ಯುರೋಪ್ ಮತ್ತು ಮಧ್ಯಪ್ರಾಚ್ಯದಿಂದ ವಿಮಾನಗಳ ಮೂಲಕ ಆಗಮಿಸುವ ಅಂತರರಾಷ್ಟ್ರೀಯ ಪ್ರಯಾಣಿಕರು ಹೊಸ ಮಾರ್ಗಸೂಚಿಗಳನ್ನು ಅನುಸರಿಸುವುದು ಕಡ್ಡಾಯವಾಗಲಿದೆ. ಹೊಸ ಮಾರ್ಗಸೂಚಿಗಳ ಪ್ರಕಾರ, ಸ್ವಯಂ ಘೋಷಣೆ ಫಾರ್ಮನ್ನು ಪ್ರಯಾಣಿಸುವ ಮೊದಲು ಆನ್‌ಲೈನ್ ಪೋರ್ಟಲ್ www.newdelhiairport.in ನಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ. ಕೊರೊನಾದ ನಕಾರಾತ್ಮಕ ವರದಿಯನ್ನು ಅಪ್‌ಲೋಡ್ ಮಾಡುವುದು ಕಡ್ಡಾಯವಾಗಿರುತ್ತದೆ. ಈ ಪರೀಕ್ಷೆಯು ಪ್ರಯಾಣದ 72 ಗಂಟೆ ಮೊದಲಿನದ್ದಾಗಿರಬೇಕು.
ಕೊರೊನಾ ವೈರಸ್ ಸಾಂಕ್ರಾಮಿಕದ ಕಾರಣ, ನಿಯಮಿತ ಅಂತರರಾಷ್ಟ್ರೀಯ ಪ್ರಯಾಣಿಕರ ವಿಮಾನವನ್ನು ಮಾರ್ಚ್ 23 ರಿಂದ ಅಮಾನತುಗೊಳಿಸಲಾಗಿದೆ. ವಂದೇ ಭಾರತ್ ಅಭಿಯಾನ್ ಮತ್ತು ಏರ್ ಬಬಲ್ ವ್ಯವಸ್ಥೆಯಡಿಯಲ್ಲಿ ವಿಶೇಷ ಅಂತಾರಾಷ್ಟ್ರೀಯ ವಿಮಾನಗಳನ್ನು ಮೇ ತಿಂಗಳಿನಿಂದ ಕೆಲವು ದೇಶಗಳಿಗೆ ಕಳುಹಿಸಲಾಗ್ತಿದೆ. ಯುಎಸ್, ಯುಕೆ, ಸೌದಿ ಅರೇಬಿಯಾ, ಕೀನ್ಯಾ, ಭೂತಾನ್ ಮತ್ತು ಫ್ರಾನ್ಸ್ ಸೇರಿದಂತೆ 24 ದೇಶಗಳೊಂದಿಗೆ ಭಾರತ ಒಪ್ಪಂದ ಮಾಡಿಕೊಂಡಿದೆ. ದೇಶೀಯ ವಿಮಾನಗಳ ಹಾರಾಟ ಹೆಚ್ಚುತ್ತಿದೆ.