alex Certify ಈ ಕಾರಣಕ್ಕೆ ವಾಹನ ಖರೀದಿ ನಿರ್ಧಾರ ಮುಂದೂಡಿದ್ದಾರೆ ಜನ;‌ ಸಮೀಕ್ಷೆಯಲ್ಲಿ ಇಂಟ್ರಸ್ಟಿಂಗ್‌ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ವಾಹನ ಖರೀದಿ ನಿರ್ಧಾರ ಮುಂದೂಡಿದ್ದಾರೆ ಜನ;‌ ಸಮೀಕ್ಷೆಯಲ್ಲಿ ಇಂಟ್ರಸ್ಟಿಂಗ್‌ ಮಾಹಿತಿ ಬಹಿರಂಗ

ಕೋವಿಡ್ ಯಾವ ರೀತಿಯಲ್ಲಿ ಅನಿಶ್ಚಿತತೆ ತಂದೊಡ್ಡಬಹುದೆಂದು ಅರಿತಿರುವ ಜನರು ವಾಹನದ ಮೇಲೆ ಹಣ ಹಾಕಲು ಹಿಂದೇಟು ಹಾಕಿರುವ ಬೆಳವಣಿಗೆ ಸರ್ವೆಯಿಂದ ಖಚಿತವಾಗಿದೆ.

ಮೊಬಿಲಿಟಿ ಔಟ್‌ಲುಕ್‌ನ ಸಮೀಕ್ಷೆಯು 80 ಪ್ರತಿಶತದಷ್ಟು ಗ್ರಾಹಕರು ನಾಲ್ಕು-ಚಕ್ರ ವಾಹನವನ್ನು ಖರೀದಿಸುವ ನಿರ್ಧಾರವನ್ನು ಮುಂದೂಡುವಂತೆ ಕೋವಿಡ್ ಮಾಡಿದೆ ಎಂಬ ಅಂಶ ದಾಖಲಿಸಿದೆ. ಪ್ರತಿಕ್ರಿಯಿಸಿದವರಲ್ಲಿ 82 ಪ್ರತಿಶತದಷ್ಟು ಜನರು ದ್ವಿಚಕ್ರ ವಾಹನವನ್ನು ಖರೀದಿಸುವ ಯೋಜನೆಗೆ ತಡೆಹಾಕಿದ್ದಾರೆ.

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳತ್ತ ಜನರ ಗಮನಹರಿದಿದೆ. ದ್ವಿಚಕ್ರ ವಾಹನ ಖರೀದಿಸಲು ಬಯಸಿದ ಗ್ರಾಹಕರ ಪೈಕಿ 40 ಪ್ರತಿಶತ ಗ್ರಾಹಕರು ಈ ವರ್ಷ ಇವಿ ಖರೀದಿಸಲು ಸಿದ್ಧರಿದ್ದು, 2021 ರಿಂದ ಖರೀದಿ ‌ಪ್ರಮಾಣ ಸ್ವಲ್ಪ ಹೆಚ್ಚಳವಾಗಿದೆ.

ಸಮ್ಮತದ ಸಂಬಂಧ: ಅತ್ಯಾಚಾರ ಆರೋಪಿಗೆ ಹೈಕೋರ್ಟ್ ನಿಂದ ಬಿಗ್ ರಿಲೀಫ್‌

ಹಾಗೆಯೇ ಪ್ರತಿಕ್ರಿಯಿಸಿದವರಲ್ಲಿ 80 ಪ್ರತಿಶತದಷ್ಟು ಜನರು 4 ಚಕ್ರದ ವಾಹನವನ್ನು ಖರೀದಿಸುವ ನಿರ್ಧಾರವನ್ನು ಮುಂದೂಡಿದ್ದಾರೆ ಮತ್ತು 82 ಪ್ರತಿಶತದಷ್ಟು ಜನರು ಕೋವಿಡ್ -19 ನಂತರದ ಪರಿಣಾಮಗಳ ಕಾರಣದಿಂದಾಗಿ ದ್ವಿಚಕ್ರ ವಾಹನ ಖರೀದಿಸುವ ನಿರ್ಧಾರವನ್ನು ಮುಂದೂಡಿದ್ದಾರೆ. ಈ ವರ್ಷ ಮುಂದೂಡುವ ಜನರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ವಾಹನ ಖರೀದಿ ಮತ್ತು ಕೋವಿಡ್ -19 ರ ಪರಿಣಾಮಗಳಿಂದ ಚೇತರಿಸಿಕೊಳ್ಳಲು ಸ್ವಲ್ಪ ಸಮಯ ಬೇಕಾಗಬಹುದು ಎಂದು ಕಾರ್ಟ್ರೇಡ್ ಟೆಕ್ನ ಬ್ರ್ಯಾಂಡ್ ಮೊಬಿಲಿಟಿ ಔಟ್ ಲುಕ್ ಹೇಳಿದೆ.

ಸಮೀಕ್ಷೆಯು ಭಾರತೀಯ ಆಟೋಮೋಟಿವ್ ಕನ್ಸ್ಯೂಮರ್ ಕ್ಯಾನ್ವಾಸ್ 2022ರ ಮಾರ್ಚ್ 3-12 ರವರೆಗೆ ನಡೆಸಲ್ಪಟ್ಟಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ 40 ಪ್ರತಿಶತ ದ್ವಿಚಕ್ರ ವಾಹನ ಗ್ರಾಹಕರು ಈ ವರ್ಷ ಇವಿ ಖರೀದಿಸಲು ಸಿದ್ಧರಿದ್ದಾರೆಂದು ಕಂಡುಹಿಡಿದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...