alex Certify ಕೊರೊನಾ ಹೊತ್ತಲ್ಲಿ ಸೆಕ್ಸ್ ಅಪಾಯಕಾರಿ, ಸುರಕ್ಷಿತ ಲೈಂಗಿಕತೆಗೆ ಇಲ್ಲಿದೆ ಸುಲಭ ದಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಹೊತ್ತಲ್ಲಿ ಸೆಕ್ಸ್ ಅಪಾಯಕಾರಿ, ಸುರಕ್ಷಿತ ಲೈಂಗಿಕತೆಗೆ ಇಲ್ಲಿದೆ ಸುಲಭ ದಾರಿ

ಕೊರೋನಾ ಸಾಂಕ್ರಾಮಿಕ ರೋಗ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಿದೆ. ಅದೇ ರೀತಿ ಲೈಂಗಿಕ ವಿಧಾನಗಳ ಮೇಲೆ ಕೊರೋನಾ ಪರಿಣಾಮವನ್ನುಂಟು ಮಾಡಿದೆ.

SIUE ಹೆಲ್ತ್ ಸರ್ವಿಸ್ ಮೆಡಿಕಲ್ ಚೀಫ್ ಡಾ. ಕೆಲ್ಲಿ ಫರೋಲ್ ಅವರು ನೀಡಿರುವ ಮಾಹಿತಿಯಂತೆ ಕೊರೊನಾ ಸಂದರ್ಭದಲ್ಲಿ ಸುರಕ್ಷಿತ ಲೈಂಗಿಕತೆಗೆ ಒತ್ತು ನೀಡಬೇಕು. ಸಂಗಾತಿಯೊಂದಿಗೆ ಸೇರುವಾಗ ಕೊರೊನಾ ಸೋಂಕು ಹರಡಬಹುದಾದ ಸಾಧ್ಯತೆ ಇದೆ. ಅಪಾಯವನ್ನು ತಂದುಕೊಳ್ಳುವುದಕ್ಕಿಂತ ಸುರಕ್ಷತೆ ಗಮನದಲ್ಲಿಟ್ಟುಕೊಳ್ಳುವುದು ಮುಖ್ಯವಾಗುತ್ತದೆ. ಪ್ರಮುಖವಾಗಿ ಸೆಕ್ಸ್ ನಿಂದ ದೂರವಿರುವುದು ಒಳ್ಳೆಯದು ಎನ್ನುವುದು ಅವರ ಅಭಿಪ್ರಾಯವಾಗಿದೆ.

ಯಾವುದೇ ಅಪಾಯ ಎದುರಾಗದಿರಲು ಲೈಂಗಿಕ ಕ್ರಿಯೆಯಿಂದ ದೂರವಿರುವುದು ಉತ್ತಮ ಮಾರ್ಗವಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೊರೊನಾ ಸೋಂಕು ತಡೆಗಟ್ಟಲು ಪ್ರಮುಖವಾಗಿ ಮಾಸ್ಕ್ ಧರಿಸುವುದು ಮತ್ತು ಅಂತರ ಕಾಯ್ದುಕೊಳ್ಳುವುದು ಮುಖ್ಯವಾಗಿದೆ. ಇಂತಹ ಸಂದರ್ಭದಲ್ಲಿ ಲೈಂಗಿಕ ಕ್ರಿಯೆಯಿಂದ ಅಪಾಯವನ್ನು ತಂದುಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಸೆಕ್ಸ್ ನಿಂದ ದೂರವಿರುವುದು ಸುರಕ್ಷಿತ ಎಂದು ನಾನು ಭಾವಿಸುತ್ತೇನೆ ಎನ್ನುತ್ತಾರೆ ಫರೋಲ್.

ಗೊತ್ತಿಲ್ಲದ ಜನರೊಂದಿಗೆ ಲೈಂಗಿಕ ಕ್ರಿಯೆ ನಡೆಸಲು, ಡೇಟಿಂಗ್ ಅಪ್ಲಿಕೇಶನ್ ಬಳಸಲು ನಾನು ಶಿಫಾರಸು ಮಾಡಲಾರೆ. ಮುಖ್ಯವಾಗಿ ಸೋಂಕು ತಡೆಗಟ್ಟುವುದು ಮುಖ್ಯವಾಗಿರುತ್ತದೆ ಎಂದಿದ್ದಾರೆ.

ಇಲಿನಾಯ್ಸ್‌ನ ಓ’ಫಾಲನ್‌ನ ಸೋಫೋಮೊರ್ ವ್ಯವಹಾರ ಆಡಳಿತದ ಪ್ರಮುಖ ಆಂಡ್ರ್ಯೂ ಸಿಮ್ಮನ್ಸ್ ಅವರ ಪ್ರಕಾರ, ಡೇಟಿಂಗ್ ಆಪ್ ಗಳ ಬಳಕೆ ವೈವಿಧ್ಯಮಯವಾಗಿದೆ. ಸುರಕ್ಷಿತವಾಗಿರಲು ಸಂಪರ್ಕಿಸುವ ಸಂಗಾತಿ ಯಾರು ಎನ್ನುವುದನ್ನು ತಿಳಿಯಬಹುದು. ಒಟ್ಟಿಗೆ ಸೇರುವುದಕ್ಕಿಂತ ವಿಡಿಯೋ ಕರೆ ಮಾಡುತ್ತಾರೆ. ಇಬ್ಬರಿಗೂ ಸರಿ ಅನಿಸಿದರೆ ಭೇಟಿಯಾಗಬಹುದಾಗಿದೆ ಎನ್ನುವುದು ಅವರ ಅಭಿಪ್ರಾಯವಾಗಿದೆ.

ಯಾವುದೇ ಲೈಂಗಿಕ ಸಂವಹನಕ್ಕೆ ಮೊದಲು ಇಬ್ಬರು ಸುರಕ್ಷತೆಗೆ ಗಮನ ನೀಡುವುದನ್ನು ಬಯಸುತ್ತಾರೆ. ಸುರಕ್ಷಿತವಾಗಿರಲು ಪರಸ್ಪರ ಹಸ್ತಮೈಥುನ ಸಹಾಯ ಮಾಡುತ್ತದೆ. ಸಂಗಾತಿಯೊಂದಿಗೆ ಹೊಸದನ್ನು ಪ್ರಯತ್ನಿಸಬಹುದು ಎನ್ನುತ್ತಾರೆ ಅವರು.

ಇಲಿನಾಯ್ಸ್‌ನ ಆಲ್ಟನ್‌ನಲ್ಲಿರುವ ಸೆಕ್ಸ್ ಟಾಯ್ಸ್ ಅಂಗಡಿಯ ಸ್ಯಾಮ್ ಮತ್ತು ಡೆಲಿಲಾಹ್‌ನ ಅಂಗಡಿ ವ್ಯವಸ್ಥಾಪಕ ನಿಕೋಲ್ ಕೋಡ್ ಅವರು, ಹಸ್ತಮೈಥುನ ಸುರಕ್ಷಿತ ಲೈಂಗಿಕತೆಗೆ ಒಂದು ಆಯ್ಕೆಯಾಗಿದೆ. ಲೈಂಗಿಕ ಆಟಿಕೆಗಳ ಬಳಕೆಯು ಸುರಕ್ಷಿತವಾಗಿದೆ. ಸಾಂಕ್ರಾಮಿಕ ರೋಗದ ಸಮಯದಲ್ಲಿ ಹೊಸ ವ್ಯಕ್ತಿಯನ್ನು ಭೇಟಿಯಾಗಿ ಅನಾರೋಗ್ಯಕ್ಕೆ ಒಳಗಾಗುವುದಕ್ಕಿಂತ ಸೆಕ್ಸ್ ಟಾಯ್ಸ್, ಹಸ್ತಮೈಥುನ ಒಳ್ಳೆಯದು ಎನ್ನುವುದು ಅವರ ಸಲಹೆಯಾಗಿದೆ.

ಸ್ಯಾಮ್ ಮತ್ತು ಡೆಲಿಲಾಹ್‌ನಂತಹ ಕಂಪನಿಗಳು ಬ್ಲೂಟೂತ್ ಮೂಲಕ ನಿಯಂತ್ರಿಸಬಹುದಾದ ಸೆಕ್ಸ್ ಟಾಯ್ಸ್ ಗಳನ್ನು ಬಿಡುಗಡೆ ಮಾಡಿವೆ. ಇವುಗಳಿಂದ ಸುರಕ್ಷಿತ ಲೈಂಗಿಕ ಕ್ರಿಯೆಗೆ ಅನುಕೂಲವಾಗುತ್ತದೆ. ಅಪಾಯ ತಂದುಕೊಳ್ಳುವುದಕ್ಕಿಂತ ಸುರಕ್ಷಿತ ವಿಧಾನಗಳನ್ನು ಅನುಸರಿಸುವುದು ಒಳ್ಳೆಯದು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...