alex Certify ಕೋವಿಡ್​ ಸೋಂಕಿತರು ಖಿನ್ನತೆಗೆ ಒಳಗಾಗದಂತೆ ತಡೆಯಲು ಮಾಡಬೇಕಾದ್ದೇನು…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್​ ಸೋಂಕಿತರು ಖಿನ್ನತೆಗೆ ಒಳಗಾಗದಂತೆ ತಡೆಯಲು ಮಾಡಬೇಕಾದ್ದೇನು…?

ಕೋವಿಡ್​ 19 ಸೋಂಕಿನಿಂದ ಬಚಾವಾಗೋದೇ ಈಗಿನ ಸಂದರ್ಭದಲ್ಲಿ ಒಂದು ದೊಡ್ಡ ಸವಾಲಾಗಿದೆ. ಎಷ್ಟೊಂದು ಪ್ರಯತ್ನಗಳ ಬಳಿಕ ನಮ್ಮ ಒಂದು ಸಣ್ಣ ತಪ್ಪಿನಿಂದಾಗಿ ಸೋಂಕು ನಮಗೆ ಭಾದಿಸಿಬಿಡಬಹುದು. ಒಮ್ಮೆ ಸೋಂಕು ಬಂತು ಅಂದರೆ ಐಸೋಲೇಷನ್​ನಲ್ಲಿ ಇರಬೇಕಾಗಿರೋದು ಕಡ್ಡಾಯವಾದ್ದರಿಂದ ಈ ಸಮಯದಲ್ಲಿ ದೈಹಿಕವಾಗಿ ಮಾತ್ರವಲ್ಲದೇ ಮಾನಸಿಕವಾಗಿಯೂ ಅನೇಕರು ಕುಗ್ಗಿ ಹೋಗ್ತಾರೆ.

ಒಬ್ಬಂಟಿಯಾಗಿ ಬದುಕೋದು ಸುಲಭವಲ್ಲ. ಅದರಲ್ಲೂ ಕಾಯಿಲೆ ಇದ್ದಾಗಂತೂ ಯಾರಾದರೊಬ್ಬರು ಜೊತೆಯಲ್ಲಿ ಇರಬೇಕು ಅನಿಸುತ್ತೆ. ನಿಮ್ಮದೇ ಸ್ನೇಹಿತರೋ ಅಥವಾ ಕುಟುಂಬಸ್ಥರೋ ಇಂತಹದ್ದೊಂದು ಸಮಸ್ಯೆಯನ್ನ ಎದುರಿಸುತ್ತಾ ಇರಬಹುದು. ಹಾಗಾದಲ್ಲಿ ನೀವು ಅವರನ್ನ ನೇರವಾಗಿ ಭೇಟಿಯಾಗದೇ ಯಾವ ರೀತಿಯಲ್ಲಿ ಧೈರ್ಯ ತುಂಬಬಹುದು ಅನ್ನೋದಕ್ಕೆ ಇಲ್ಲೊಂದಿಷ್ಟು ಸಲಹೆಗಳಿವೆ.

ಈಗಂತೂ ಆನ್​ಲೈನ್​ ಗೇಮ್​ಗಳಿಗೆ ಬರವಿಲ್ಲ. ನಿಮ್ಮದೇ ಸ್ನೇಹಿತರು ಸೋಂಕಿಗೆ ಒಳಗಾಗಿದ್ದರಿಗೆ ಅವರನ್ನ ಆನ್​ಲೈನ್​ ಗೇಮ್​ ಆಡುವಂತೆ ಆಹ್ವಾನಿಸಿ. ಚೆಸ್​, ಲೂಡೋನಂತಹ ಆನ್​ಲೈನ್​ ಗೇಮ್​ಗಳಿಂದ ಅವರಿಗೂ ಸೋಂಕಿನ ಚಿಂತೆ ದೂರಾಗಬಹುದು.

ಒಬ್ಬರೇ ರೂಮಿನಲ್ಲಿ 14 ದಿನಗಳ ಕಾಲ ಕೂರೋದು ಅಂದರೆ ಸುಲಭದ ಮಾತಲ್ಲ. ಹೀಗಾಗಿ ಅವರ ಒಂಟಿತನವನ್ನ ಹೋಗಲಾಡಿಸಲು ನೀವು ವಿಡಿಯೋ ಕಾಲ್​ ಮಾಡಬಹುದು. ಈಗಂತೂ ಎಲ್ಲರೂ ಕೈಯಲ್ಲಿ ಆಂಡ್ರ್ಯಾಯ್ಡ್​ ಮೊಬೈಲ್​ ಇರೋದ್ರಿಂದ ನೀವು ಆರಾಮಾಗಿ ಈ ಕೆಲಸವನ್ನ ಮಾಡಬಹುದು.

ರೂಮಿನಲ್ಲಿ ಸೋಂಕಿತರು ಲಾಕ್​ ಆಗಿದ್ದಾರೆ ಅಂದ ಮಾತ್ರಕ್ಕೆ ಅವರ ಗೋಜಿಗೇ ಹೋಗದೇ ಇರಬೇಡಿ. ನೀನು ಹುಷಾರಾಗೋದೇ ನಮಗೆ ಬೇಕಾಗಿರೋದು ಅಂತ ಅವರಿಗೆ ಪದೇ ಪದೇ ಹೇಳುತ್ತೀರಿ. ಪದೇ ಪದೇ ಅವರ ಆರೋಗ್ಯದ ಬಗ್ಗೆ ಅಪ್​ಡೇಟ್ಸ್ ಪಡೀತಾನೇ ಇರಿ. ಮಾನಸಿಕವಾಗಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...