alex Certify 16 ಪ್ರತಿಶತ ಎರಡೂ ಡೋಸ್​ ಲಸಿಕೆ ಪೂರ್ಣ: ಕೇಂದ್ರ ಸಚಿವಾಲಯದಿಂದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

16 ಪ್ರತಿಶತ ಎರಡೂ ಡೋಸ್​ ಲಸಿಕೆ ಪೂರ್ಣ: ಕೇಂದ್ರ ಸಚಿವಾಲಯದಿಂದ ಮಾಹಿತಿ

ಕೊರೊನಾ ಮೂರನೇ ಅಲೆಯ ಬಗ್ಗೆ ಆತಂಕ ಹೆಚ್ಚುತ್ತಿರುವ ನಡುವೆಯೇ ಕೇಂದ್ರ ಆರೋಗ್ಯ ಸಚಿವಾಲಯವು ದೇಶದ ವಯಸ್ಕರಲ್ಲಿ 16 ಪ್ರತಿಶತ ಮಂದಿ ಸಂಪೂರ್ಣ ಲಸಿಕೆ ಪಡೆದಿದ್ದಾರೆ ಎಂದು ಮಾಹಿತಿ ನೀಡಿದೆ.

54 ಪ್ರತಿಶತ ಮಂದಿ ಕನಿಷ್ಟ 1 ಡೋಸ್​ ಲಸಿಕೆ ಪಡೆದಿದ್ದಾರೆ ಎಂದು ಹೇಳಿದೆ.
ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನದ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್​ ಭೂಷಣ್​, ಆಗಸ್ಟ್​ ತಿಂಗಳೊಂದರಲ್ಲೇ 18.38 ಕೋಟಿ ಡೋಸ್​ ಕೋವಿಡ್​ ಲಸಿಕೆಯನ್ನು ನೀಡಲಾಗಿದೆ ಎಂದು ಹೇಳಿದ್ರು.

ಆಗಸ್ಟ್​ ತಿಂಗಳಲ್ಲಿ ಪ್ರತಿದಿನ ಸರಾಸರಿ 59.29 ಲಕ್ಷ ಡೋಸ್​ ಲಸಿಕೆ ನೀಡಲಾಗಿದೆ. ಆಗಸ್ಟ್​ ಕೊನೆಯ ವಾರದಲ್ಲಿ ಪ್ರತಿ ದಿನ 80 ಲಕ್ಷ ಡೋಸ್​ ನೀಡಲಾಗಿದೆ ಎಂದು ಹೇಳಿದ್ರು.

ಸಿಕ್ಕಿಂ, ದಾದ್ರಾ, ನಗರ್​ ಹವೇಲಿ ಹಾಗೂ ಹಿಮಾಚಲ ಪ್ರದೇಶದಲ್ಲಿ ಮೊದಲ ಡೋಸ್​ ಲಸಿಕೆಯನ್ನು 100 ಪ್ರತಿಶತ ಪೂರೈಸಿದ್ದಾರೆ ಎಂದು ಮಾಹಿತಿ ನೀಡಿದ್ರು .

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...