alex Certify ಕೋವ್ಯಾಕ್ಸಿನ್​ ಲಸಿಕೆ ಅವಧಿ 1 ವರ್ಷಗಳಿಗೆ ವಿಸ್ತರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವ್ಯಾಕ್ಸಿನ್​ ಲಸಿಕೆ ಅವಧಿ 1 ವರ್ಷಗಳಿಗೆ ವಿಸ್ತರಣೆ

ಭಾರತ್​ ಬಯೋಟೆಕ್​​​ ಕಂಪನಿ ತಯಾರಿಸಿರುವ ಕೋವ್ಯಾಕ್ಸಿನ್​​ ಲಸಿಕೆಯ ಅವಧಿಯನ್ನು 9 ತಿಂಗಳನಿಂದ 12 ತಿಂಗಳುಗಳಿಗೆ ಏರಿಕೆ ಮಾಡಲು ರಾಷ್ಟ್ರೀಯ ಔಷಧ ನಿಯಂತ್ರಕ ಸಂಸ್ಥೆ ಅನುಮೋದನೆ ನೀಡಿದೆ. ಲಸಿಕೆ ವ್ಯರ್ಥವಾಗುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಈ ಹಿಂದೆ ಕೊರೊನಾ ಲಸಿಕೆಯ ಅವಧಿ ಆರು ತಿಂಗಳಿಗೆ ನಿಗದಿಯಾಗಿತ್ತು. ಬಳಿಕ ಅದನ್ನು 9 ತಿಂಗಳಿಗೆ ಹೆಚ್ಚಿಸಲಾಯ್ತು. ಇದೀಗ ಕೋವ್ಯಾಕ್ಸಿನ್​ ಅವಧಿಯನ್ನು 1 ವರ್ಷಗಳವರೆಗೆ ವಿಸ್ತರಿಸಿದಂತಾಗಿದೆ.

ಕೋವ್ಯಾಕ್ಸಿನ್​​ ಲಸಿಕೆಯನ್ನು ಭಾರತ್​ ಬಯೋಟೆಕ್​​ ಹಾಗೂ ಐಸಿಎಂಆರ್​​​ ಜಂಟಿಯಾಗಿ ನಿರ್ಮಿಸಿದೆ. ಇದು ಸ್ವದೇಶಿ ನಿರ್ಮಿತ ಲಸಿಕೆಯಾಗಿದೆ. ಈ ವರ್ಷದ ಜನವರಿ ಮೂರರಂದು ಕೋವ್ಯಾಕ್ಸಿನ್​ ಲಸಿಕೆ ಬಳಕೆಗೆ ತುರ್ತು ಅನುಮೋದನೆ ದೊರಕಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...