ಭಾರತ್ ಬಯೋಟೆಕ್ ಕಂಪನಿ ತಯಾರಿಸಿರುವ ಕೋವ್ಯಾಕ್ಸಿನ್ ಲಸಿಕೆಯ ಅವಧಿಯನ್ನು 9 ತಿಂಗಳನಿಂದ 12 ತಿಂಗಳುಗಳಿಗೆ ಏರಿಕೆ ಮಾಡಲು ರಾಷ್ಟ್ರೀಯ ಔಷಧ ನಿಯಂತ್ರಕ ಸಂಸ್ಥೆ ಅನುಮೋದನೆ ನೀಡಿದೆ. ಲಸಿಕೆ ವ್ಯರ್ಥವಾಗುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ಈ ಹಿಂದೆ ಕೊರೊನಾ ಲಸಿಕೆಯ ಅವಧಿ ಆರು ತಿಂಗಳಿಗೆ ನಿಗದಿಯಾಗಿತ್ತು. ಬಳಿಕ ಅದನ್ನು 9 ತಿಂಗಳಿಗೆ ಹೆಚ್ಚಿಸಲಾಯ್ತು. ಇದೀಗ ಕೋವ್ಯಾಕ್ಸಿನ್ ಅವಧಿಯನ್ನು 1 ವರ್ಷಗಳವರೆಗೆ ವಿಸ್ತರಿಸಿದಂತಾಗಿದೆ.
ಕೋವ್ಯಾಕ್ಸಿನ್ ಲಸಿಕೆಯನ್ನು ಭಾರತ್ ಬಯೋಟೆಕ್ ಹಾಗೂ ಐಸಿಎಂಆರ್ ಜಂಟಿಯಾಗಿ ನಿರ್ಮಿಸಿದೆ. ಇದು ಸ್ವದೇಶಿ ನಿರ್ಮಿತ ಲಸಿಕೆಯಾಗಿದೆ. ಈ ವರ್ಷದ ಜನವರಿ ಮೂರರಂದು ಕೋವ್ಯಾಕ್ಸಿನ್ ಲಸಿಕೆ ಬಳಕೆಗೆ ತುರ್ತು ಅನುಮೋದನೆ ದೊರಕಿತ್ತು.