ದೆಹಲಿ ಮೆಟ್ರೋ ಮತ್ತೊಮ್ಮೆ ಸುದ್ದಿಯಾಗಿದ್ದು ನೆಟ್ಟಿಗರು ಟೀಕಿಸುವಂತಾಗಿದೆ. ಮೆಟ್ರೋ ರೈಲಿನಲ್ಲಿ ಯುವ ಜೋಡಿಯೊಂದು ನೆಲದ ಮೇಲೆ ಕುಳಿತು ಕಿಸ್ ಮಾಡಿದೆ. ಈ ವಿಡಿಯೋ ವೈರಲ್ ಆಗಿದ್ದು ದೆಹಲಿ ಮೆಟ್ರೋದಲ್ಲಿ ಏನಾಗ್ತಿದೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ವೈರಲ್ ಆಗಿರುವ ವಿಡಿಯೋವನ್ನು ಅದೇ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಮತ್ತೊಬ್ಬ ಪ್ರಯಾಣಿಕರು ರೆಕಾರ್ಡ್ ಮಾಡಿದ್ದಾರೆ. ಕ್ಲಿಪ್‌ನಲ್ಲಿ ಹುಡುಗಿಯೊಬ್ಬಳು ಹುಡುಗನ ತೊಡೆಯ ಮೇಲೆ ಮಲಗಿರುವಾಗ ಹುಡುಗ ಆಕೆಗೆ ಚುಂಬಿಸುತ್ತಿರುವುದನ್ನು ಕಾಣಬಹುದು.
ನಾಚಿಕೆಯಿಲ್ಲದ ಜೋಡಿ ಎಂದು ಅವರನ್ನು ನೆಟ್ಟಿಗರು ಟೀಕಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೆಹಲಿ ಮೆಟ್ರೋ ರೈಲು ನಿಗಮವನ್ನು ಒತ್ತಾಯಿಸಿದ್ದಾರೆ.
ಇದು ನಿಜವಾದ ಪ್ರೀತಿಯೇ ಅಥವಾ ಕೇವಲ ಸಾಮಾಜಿಕ ಮಾಧ್ಯಮಕ್ಕಾಗಿಯೇ ? ಈ ರೀತಿಯ ರೀಲ್ಸ್ ಇತ್ತೀಚಿಗೆ ಜಾಸ್ತಿಯಾಗ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.
https://twitter.com/youthchallenge9/status/1656166865029455872?ref_src=twsrc%5Etfw%7Ctwcamp%5Etweetembed%7Ctwterm%5E1656170871759814658%7Ctwgr%5Effe854702e119b1d423c07692d245a880c907e30%7Ctwcon%5Es2_&ref_url=https%3A%2F%2Fwww.indiatoday.in%2Ftrending-news%2Fstory%2Fcouple-seen-kissing-in-delhi-metro-viral-video-after-bralette-girl-internet-aghast-2377170-2023-05-10