ಕಷ್ಟ ಬಂದಾಗ್ಲೇ ಉಳಿತಾಯದ ಮಹತ್ವ ಗೊತ್ತಾಗುವುದು. ಪ್ರತಿಯೊಬ್ಬರ ಜೀವನದಲ್ಲೂ ಉಳಿತಾಯ ಬಹಳ ಮುಖ್ಯ. ಹಣ ನೀರಿನಂತೆ ಖರ್ಚಾಗುತ್ತಿರುತ್ತದೆ. ಎಷ್ಟೇ ಉಳಿತಾಯದ ಪ್ಲಾನ್ ಮಾಡಿದ್ರೂ, ಉಳಿತಾಯ ಸಾಧ್ಯವಿಲ್ಲ ಎನ್ನುವವರಿದ್ದಾರೆ. ಅಂತವರಿಗೆ ಈ ದಂಪತಿ ಮಾದರಿ. 10 ತಿಂಗಳಲ್ಲಿ 20 ಲಕ್ಷ ಉಳಿತಾಯ ಮಾಡಿದ ಜೋಡಿ, ಉಳಿತಾಯದ ಪ್ಲಾನ್ ಕೂಡ ಹೇಳಿದ್ದಾರೆ.
ಕ್ರಿಕೆಟ್ ಪ್ರಿಯರನ್ನು ಬೆರಗಾಗಿಸುತ್ತೆ ಪುಟಾಣಿ ಬಾಲಕನ ಸ್ಪಿನ್ ಕೌಶಲ್ಯ
ಬ್ರಿಟನ್ ನ ಅಬ್ಬಿ ಡನ್ಸ್ಮೂರ್ ಪತಿ ಜೊತೆ ಉಳಿತಾಯದ ಪ್ಲಾನ್ ಮಾಡಿದ್ಲು. ನಂತ್ರ ಅದನ್ನು ಯಶಸ್ವಿಯಾಗಿ ನಿಭಾಯಿಸಿದ್ದಾಳೆ. 10 ತಿಂಗಳಲ್ಲಿ 20 ಲಕ್ಷ ಉಳಿಸಿರುವ ಜೋಡಿ 3 ವರ್ಷದಲ್ಲಿ 90 ಲಕ್ಷ ಉಳಿಸುವ ಪ್ಲಾನ್ ಮಾಡ್ತಿದ್ದಾರೆ. ಟಿಕ್ ಟಾಕ್ ನಲ್ಲಿ ಉಳಿತಾಯದ ಕೆಲ ಟಿಪ್ಸ್ ಹೇಳಿದ್ದಾಳೆ.
ʼಕ್ರೆಡಿಟ್ ಕಾರ್ಡ್ʼ ನ ಈ ಲಾಭ ನಿಮಗೆ ತಿಳಿದಿರಲಿ
ಅಬ್ಬಿ ಪ್ರಕಾರ, ಮೊದಲು ಪತಿ-ಪತ್ನಿ ಜಂಟಿ ಖಾತೆ ಮಾಡಬೇಕು. ಬಿಲ್ ಗಳನ್ನು ಪ್ರತ್ಯೇಕವಾಗಿಟ್ಟುಕೊಳ್ಳಬೇಕು. ಸೂಪರ್ ಮಾರ್ಕೆಟ್ ನಲ್ಲಿ ಆಹಾರ ಖರೀದಿ ಮಾಡಬೇಕು. ಅಲ್ಲಿ ಕಡಿಮೆ ಬೆಲೆಗೆ ಆಹಾರ ಸಿಗುತ್ತದೆ. ಅನಗತ್ಯ ಖರ್ಚು ಮಾಡಬಾರದು. ಕಡಿಮೆ ಬೆಲೆಗೆ ಸಿಗುವ ವಸ್ತುಗಳನ್ನು ಖರೀದಿ ಮಾಡುವುದು ಬೆಸ್ಟ್. ಬ್ರಾಂಡ್ ಹಿಂದೆ ಬಿದ್ರೆ ಹಣ ವ್ಯರ್ಥವಾಗುತ್ತದೆ. ಹೊರಗಿನ ತಿಂಡಿ ಸೇವನೆ ಮಾಡುವುದಕ್ಕಿಂತ ಮನೆಯಲ್ಲಿ ತಯಾರಿಸಿದ ಆಹಾರ ಸೇವನೆ ಮಾಡಿದ್ರೆ ಮತ್ತೊಂದಿಷ್ಟು ಉಳಿಯುತ್ತದೆ. 3-4 ತಿಂಗಳಲ್ಲಿ ಒಮ್ಮೆ ಹೊರಗಿನ ಆಹಾರ ಸೇವನೆ ಮಾಡಿದ್ರೆ ಸಾಕಾಗುತ್ತದೆ. ಅಗತ್ಯ ಹಾಗೂ ಅನಗತ್ಯ ವಸ್ತುಗಳ ಮಧ್ಯೆ ವ್ಯತ್ಯಾಸ ಗೊತ್ತಿರಬೇಕು. ಆಗ ಮಾತ್ರ ಉಳಿತಾಯ ಸಾಧ್ಯವೆಂದು ಆಕೆ ಹೇಳಿದ್ದಾಳೆ.