alex Certify ಸಾವಿನಲ್ಲೂ ಜೊತೆಯಾದ ದಂಪತಿ: ಪತಿ ನಿಧನದ ಬೆನ್ನಲ್ಲೇ ಆಘಾತದಿಂದ ಇಹಲೋಕ ತ್ಯಜಿಸಿದ ಪತ್ನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾವಿನಲ್ಲೂ ಜೊತೆಯಾದ ದಂಪತಿ: ಪತಿ ನಿಧನದ ಬೆನ್ನಲ್ಲೇ ಆಘಾತದಿಂದ ಇಹಲೋಕ ತ್ಯಜಿಸಿದ ಪತ್ನಿ

ಮೈಸೂರು: ಚಂದಗಾಲ ಗ್ರಾಮದಲ್ಲಿ ವೃದ್ಧ ದಂಪತಿ ಸಾವಿನಲ್ಲಿಯೂ ಒಂದಾಗಿದ್ದಾರೆ. ಮೈಸೂರು ಜಿಲ್ಲೆ ಕೆಆರ್ ನಗರ ತಾಲ್ಲೂಕಿನ ಚಂದಗಾಲ ಗ್ರಾಮದಲ್ಲಿ ಘಟನೆ ನಡೆದಿದೆ.

ಚಂದಗಾಲ ಗ್ರಾಮದ ರಾಮೇಗೌಡ(75) ಮತ್ತು ಗೌರಮ್ಮ(70) ಒಟ್ಟಿಗೆ ಇಹಲೋಕ ತ್ಯಜಿಸಿದ್ದಾರೆ. ಜಮೀನಿನಲ್ಲಿ ಕೆಲಸ ಮಾಡುವಾಗ ರಾಮೇಗೌಡ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾರೆ. ಪತಿಯ ಸಾವು ಕಂಡು ಆಘಾತಗೊಂಡ ಪತ್ನಿ ಗೌರಮ್ಮ ಕುಸಿದು ಬಿದ್ದಿದ್ದಾರೆ.

ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಕರೆದುಕೊಂಡು ಬರಲಾಗಿದೆ. ಪತಿ ರಾಮೇಗೌಡರ ಸಂಸ್ಕಾರದ ವೇಳೆ ಪತ್ನಿ ಗೌರಮ್ಮ ಕೂಡ ಮೃತಪಟ್ಟಿದ್ದಾರೆ. ಗ್ರಾಮಸ್ಥರು ಅಕ್ಕಪಕ್ಕದಲ್ಲಿ ವೃದ್ಧ ದಂಪತಿಯ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...