alex Certify ಕಾರ್ ಗೆ ಬೆಂಕಿ ತಗುಲಿ ಗರ್ಭಿಣಿ ಪತ್ನಿ, ಪತಿ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರ್ ಗೆ ಬೆಂಕಿ ತಗುಲಿ ಗರ್ಭಿಣಿ ಪತ್ನಿ, ಪತಿ ಸಾವು

ಕಣ್ಣೂರು: ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಕಾರ್ ಗೆ ಬೆಂಕಿ ತಗುಲಿ ಹೊತ್ತಿ ಉರಿದ ಪರಿಣಾಮ ಗರ್ಭಿಣಿ ಹಾಗೂ ಆಕೆಯ ಪತಿ ಸಜೀವ ದಹನವಾಗಿರುವ ದಾರುಣ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ.

ರೀಶಾ(26) ಮತ್ತು ಆಕೆಯ ಪತಿ ಪ್ರಿಜಿತ್(35) ಮೃತಪಟ್ಟವರು. ರೀಶಾ ಅವರಿಗೆ ಹೆರಿಗೆ ನೋವು ಕಾನಿಸಿಕೊಂಡಿದ್ದರಿಂದ ಅವರು ಜಿಲ್ಲಾ ಆಸ್ಪತ್ರೆಗೆ ಹೋಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

2020 ರ ಮಾರುತಿ ಎಸ್-ಪ್ರೆಸ್ಸೋ ಕಾರ್ ನಲ್ಲಿ ಆರು ಜನರು ಪ್ರಯಾಣಿಸುತ್ತಿದ್ದರು. ಮಗು ಸೇರಿದಂತೆ ಹಿಂಬದಿಯಲ್ಲಿದ್ದ ನಾಲ್ವರು ಪಾರಾಗಿದ್ದಾರೆ. ಆದರೆ ಮುಂಭಾಗದಲ್ಲಿದ್ದ ದಂಪತಿಗಳಿಗೆ ಬೆಂಕಿ ತಗುಲಿದಾಗ ಬಾಗಿಲು ತೆರೆಯಲು ಸಾಧ್ಯವಾಗಲಿಲ್ಲ.

ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತಲುಪುವಷ್ಟರಲ್ಲಿ ಪ್ರಿಜಿತ್ ಮತ್ತು ರೀಶಾ ಸಾವನ್ನಪ್ಪಿದ್ದರು. ದಂಪತಿಯನ್ನು ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದು ಸ್ಥಳದಲ್ಲಿದ್ದವರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...