alex Certify ʼತುಮ್ಸಾ ಕೋಯಿ ಪ್ಯಾರಾʼಗೆ ವಧು-ವರನ ಬೊಂಬಾಟ್ ಸ್ಟೆಪ್ಸ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼತುಮ್ಸಾ ಕೋಯಿ ಪ್ಯಾರಾʼಗೆ ವಧು-ವರನ ಬೊಂಬಾಟ್ ಸ್ಟೆಪ್ಸ್….!

ವೈರಲ್ ವಿಡಿಯೋದಲ್ಲಿ ತಮ್ಮ ಮದುವೆಯಲ್ಲಿ ಗೋವಿಂದ, ಕರಿಷ್ಮಾ ಕಪೂರ್ ಅವರ ತುಮ್ಸಾ ಕೋಯಿ ಪ್ಯಾರಾಗೆ ದಂಪತಿಗಳು ನೃತ್ಯ ಮಾಡಿದ್ದಾರೆ. ಇಂಟರ್ನೆಟ್ ಪ್ರಭಾವಿತವಾಗಿದೆ: ನವವಿವಾಹಿತ ದಂಪತಿಗಳು ತಮ್ಮ ಮದುವೆಯಲ್ಲಿ ಗೋವಿಂದ ಮತ್ತು ಕರಿಷ್ಮಾ ಕಪೂರ್ ಅವರ ಹಾಡಿಗೆ ನೃತ್ಯ ಮಾಡುವ ವಿಡಿಯೋ ಇದಾಗಿದೆ.

ದೇಸಿ ಮದುವೆಯಲ್ಲಿ ನೃತ್ಯ, ಹಾಡು, ತಮಾಷೆ, ಮೋಜು-ಮಸ್ತಿ ಇಲ್ಲದಿದ್ರೆ ಆ ಕಾರ್ಯಕ್ರಮವೇ ಅಪೂರ್ಣ ಎಂದೆನಿಸುತ್ತದೆ. ಇದೀಗ ನವವಿವಾಹಿತ ಜೋಡಿಯೊಂದು ತಮ್ಮ ಮದುವೆಯಲ್ಲಿ ಬಾಲಿವುಡ್ ಸ್ಟಾರ್ಸ್ ಗೋವಿಂದ ಮತ್ತು ಕರಿಷ್ಮಾ ಕಪೂರ್ ಅವರ ಹಾಡಿಗೆ ಡ್ಯಾನ್ಸ್ ಮಾಡಿದ ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ.

1994 ರ ಚಲನಚಿತ್ರ ಖುದ್ದಾರ್‌ನ ಈ ಬಾಲಿವುಡ್ ಹಾಡಿಗೆ ಮದುವೆಯ ಧಿರಿಸಿನಲ್ಲಿ ವಧು-ವರ ಅದ್ಭುತವಾಗಿ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದು 6 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ. ದಂಪತಿಯನ್ನು ಅಜಯ್ ಮತ್ತು ಕಿರಣ್ ಎಂದು ಗುರುತಿಸಲಾಗಿದೆ.

ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ, ನವವಿವಾಹಿತರು ತಮ್ಮ ಸೂಪರ್ ಕೂಲ್ ನೃತ್ಯವನ್ನು ಪ್ರದರ್ಶಿಸುತ್ತಿರುವುದನ್ನು ಕಾಣಬಹುದು. ಅವರು ತಮ್ಮ ಮದುವೆಯ ದಿನದಂದು ವೇದಿಕೆಯಲ್ಲಿ ಬೊಂಬಾಟ್ ಆಗಿ ಸ್ಟೆಪ್ಸ್ ಹಾಕಿದ್ದಾರೆ. ವಧು ಸುಂದರವಾದ ಲೆಹೆಂಗಾ ತೊಟ್ಟಿದ್ದರೆ, ವರ ಸೂಟ್ ಧರಿಸಿದ್ದರು.

ಈ ಜೋಡಿ ನಿಜವಾಗಿಯೂ ‘ಮೇಡ್ ಫಾರ್ ಈಚ್ ಅದರ್’ ಎಂದು ದೀಪಾಂಶು ಕಬ್ರಾ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಧು-ವರನ ಡಾನ್ಸ್ ಮಾಡುವ ವಿಡಿಯೋವನ್ನು ನೆಟ್ಟಿಗರು ಇಷ್ಟಪಟ್ಟಿದ್ದಾರೆ. ಕೆಲವರು ದಂಪತಿಯ ವೈವಾಹಿಕ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದರೆ, ಇನ್ನು ಕೆಲವರು ಅವರಿಬ್ಬರ ಬೊಂಬಾಟ್ ನೃತ್ಯವನ್ನು ಹಾಡಿ ಹೊಗಳಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...