alex Certify ಮಾಜಿ ಪತ್ನಿಯ ವೆಡ್ಡಿಂಗ್ ಡ್ರೆಸ್ ಧರಿಸಿದ್ದ ನವವಧು: ದಂಪತಿಗಳು ಅರೆಸ್ಟ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಜಿ ಪತ್ನಿಯ ವೆಡ್ಡಿಂಗ್ ಡ್ರೆಸ್ ಧರಿಸಿದ್ದ ನವವಧು: ದಂಪತಿಗಳು ಅರೆಸ್ಟ್….!

ವಧುವಿನ ಮದುವೆಯ ಡ್ರೆಸ್ ವರನ ಮಾಜಿ ಪತ್ನಿಯದ್ದಾಗಿದ್ದು ಕಳವು ಮಾಡಲಾಗಿದೆ ಎಂದು ತಿಳಿದ ನಂತರ ಆಗತಾನೇ ಕೈಹಿಡಿದಿದ್ದ ದಂಪತಿಗಳಿಬ್ಬರನ್ನ ಪೊಲೀಸರು ಬಂಧಿಸಿದ್ದಾರೆ. ಹೊಸದಾಗಿ ಮದುವೆಯಾಗಿರುವ ವರ, ಅವರ ಮಾಜಿ ಪತ್ನಿ ವಿಚ್ಛೇದನ ಪಡೆದಾಗ ಆಕೆಯ ಕುಟುಂಬದ ಸಾಂಪ್ರದಾಯಿಕ ವೆಡ್ಡಿಂಗ್ ಡ್ರೆಸ್ ನಿಗೂಢವಾಗಿ ಕಾಣೆಯಾಗಿತ್ತು.‌

ಆದರೆ ಇತ್ತೀಚೆಗೆ ಇದೇ ಡ್ರೆಸ್ ಅನ್ನು ವಧು ಧರಿಸಿದ್ದಳು.‌ ವರ ಹಾಗೂ ಆತನ ಮಾಜಿ ಪತ್ನಿ ಇಬ್ಬರಿಗು ಮ್ಯೂಚುಯಲ್‌ ಸ್ನೇಹಿತೆಯಾಗಿರುವರೊಬ್ಬರು ಈ ಮದುವೆಯಲ್ಲಿ ಹಾಜರಿದ್ದರು. ವಧು ತೊಟ್ಟಿದ್ದ ಉಡುಗೆ ನೋಡಿದ ಅವರು, ಫೋಟೊ ಕ್ಲಿಕ್ ಮಾಡಿ ಮಾಜಿ ಪತ್ನಿಗೆ ಕಳುಹಿಸಿದರು. ಜೊತೆಗೆ ಈ ಡ್ರೆಸ್ ಹಾಗೂ ನಿನ್ನ ವೆಡ್ಡಿಂಗ್ ಡ್ರೆಸ್ ಎಷ್ಟು ಹೋಲುತ್ತವೆ ಎಂದು ಸಂದೇಶ ಕಳುಹಿಸಿದ್ದರು. ಈ ಸಂದೇಶ ನೋಡಿದಾಕ್ಷಣ ವರನ ಮಾಜಿ ಪತ್ನಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಮದುವೆ ನಡೆಯುತ್ತಿದ್ದ ಸ್ಥಳಕ್ಕೆ ಬಂದ ಪೊಲೀಸರು ವಧು ಹಾಗೂ ವರನನ್ನು ಬಂಧಿಸಿದ್ದಾರೆ.

ದ್ವಿತೀಯ ಪಿಯುಸಿ ಅಂತಿಮ‌ ವೇಳಾಪಟ್ಟಿ ಪ್ರಕಟ: ಇಲ್ಲಿದೆ ಕಂಪ್ಲೀಟ್ ಲಿಸ್ಟ್…..!

ರೆಡ್ಡಿಟ್ ನಲ್ಲಿ ಈ ಬಗ್ಗೆ ಹಂಚಿಕೊಡಿರುವ ಆಕೆ ವರನ ಹೆಸರು ಆಡಮ್ ಎಂದು ತಿಳಿಸಿದ್ದಾರೆ. ಮಾಜಿ ಪತ್ನಿಯನ್ನು 38ವರ್ಷದ ಮೇರಿ ಎನ್ನಲಾಗಿದೆ. ಕೆಲ ವರ್ಷಗಳ ಹಿಂದೆ ಇವರಿಬ್ಬರು ತನ್ನೊದಿಗೆ ಒಟ್ಟಿಗೆ ಕೆಲಸ ಮಾಡಿದ್ದಾರೆ.‌ ಅವರು ಕಂಪನಿಗೆ ಸೇರಿದಾಗ ಅವರು ಮದುವೆಯಾಗಿ ಕೆಲವು ವರ್ಷಗಳಾಗಿತ್ತು. ಆದರೆ ಮೇರಿ ಇದ್ದಕ್ಕಿದ್ದಂತೆ ಕಂಪನಿಯನ್ನು ತೊರೆದರು. ಅವರು ರಿಸೈನ್ ಮಾಡಿದ ಕೆಲ ಸಮಯದ ನಂತರ ಆಡಮ್, ಚೆಲ್ಸಾ ಎಂಬ ಮಹಿಳೆಯೊಂದಿಗೆ ಸೇರಿಕೊಂಡು ಮೇರಿಗೆ ವಂಚಿಸಿದ್ದರು ಎಂದು ತಿಳಿದು ಬಂದಿತ್ತು. ಹೀಗಾಗಿ ಇವರಿಬ್ಬರು ವಿಚ್ಛೇಧನ ಪಡೆದುಕೊಂಡಿದ್ದರು.‌

ವಿಚ್ಛೇದನದ ನಂತರ ಮೇರಿ ಮತ್ತೊಂದು ಮನೆಗೆ ಶಿಫ್ಟ್ ಆಗುವಾಗ ತಮ್ಮ ವೆಡ್ಡಿಂಗ್ ಡ್ರೆಸ್ ಹಾಗೂ ಅವರ ಕುಟುಂಬಕ್ಕೆ ಸಾಂಪ್ರದಾಯಿಕ ಬಂದ ಇತರ ವಸ್ತುಗಳ ಕಾಣೆಯಾಗಿರುವುದನ್ನು ಗಮನಿಸಿದರು. ಆದರೆ ಶಿಫ್ಟಿಂಗ್ ನಲ್ಲಿ ಎಲ್ಲೋ ಹಾಕಿ ಮರೆತಿರಬಹುದು ಎಂದು ಸುಮ್ಮನಾಗಿದ್ದರು. ಈ ಬಗ್ಗೆ ಆಡಮ್ ಬಳಿ ಕೇಳಿದ್ದರು ಆತ ನನ್ನ ಬಳಿ ನಿನಗೆ ಸೇರಿದ ಯಾವುದೇ ವಸ್ತುಗಳಿಲ್ಲ ಎಂದಿದ್ದರು. ಒಂದು ದಿನ ಆಡಮ್ ಚೆಲ್ಸಾಳೊಂದಿಗೆ ವಿವಾಹವಾಗುತ್ತಿರುವ ಸುದ್ದಿ ತಿಳಿಯಿತಾದರೂ ಮೇರಿ ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ತನ್ನ ಉಡುಗೆ ಧರಿಸಿದ್ದನ್ನ ಮೇರಿ ಸಹಿಸಲಿಲ್ಲ. ಪೊಲೀಸರಿಗೆ ಮಾಹಿತಿ ನೀಡಿ ಸೂಕ್ತ ಕ್ರಮ ಕೈಗೊಂಡಿದ್ದಾರೆಂದು ಆಕೆಯ ಸ್ನೇಹಿತೆ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...