17 ವರ್ಷದವಳಾಗಿದ್ದಾಗ ಜೆನ್ನಿಗೆ ’ಚಾರ್ಮೈನ್ ‘ ಎಂಬ ಮಗಳು ಜನಿಸಿದ್ದಳು. ಆಕೆಯ ಜತೆಗಾರ ಗೆಳೆಯನಿಂದ ಆಕೆಗೆ ಮಗುವನ್ನು ಬೆಳೆಸುವ ನೆರವು ಸಿಗಲಿಲ್ಲ. ಕೂಡಲೇ ಆಕೆ ಬಾಯ್ಫ್ರೆಂಡ್ ನನ್ನು ದೂರ ತಳ್ಳಿದಳು, ಸ್ವತಂತ್ರವಾಗಿ ಕೆಲಸ ಮಾಡಿಕೊಂಡು ಬದುಕುವ ಸ್ವಾವಲಂಬಿ ಮಹಿಳೆಯಾಗಿದ್ದಳು.
ಹೀಗೆ ಸಾಗುತ್ತಿದ್ದಾಗ ಐದು ವರ್ಷಗಳ ನಂತರ ರಿಚರ್ಡ್ ಎಂಬಾತ ಜೆನ್ನಿಯ ಜೀವನ ಪ್ರವೇಶಿಸಿದ. ಜೆನ್ನಿಯ ಐದು ವರ್ಷದ ಮಗಳು ಚಾರ್ಮೈನ್ ಳನ್ನು ಸ್ವಂತ ಮಗಳಂತೆಯೇ ಪೋಷಿಸುವ ಜವಾಬ್ದಾರಿಯನ್ನು ಕೂಡ ಹೊತ್ತುಕೊಂಡ.
ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್: 10ನೇ ತರಗತಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿದೆ 4000 ಹುದ್ದೆ
ಅಮ್ಮನ ದಾರಿಯನ್ನೇ ಮಗಳು ತನ್ನ ಹರೆಯದಲ್ಲಿ ತುಳಿಯುತ್ತಾಳೆ ಎಂಬ ಊಹೆ ರಿಚರ್ಡ್ ಮತ್ತು ಜೆನ್ನಿಗೆ ಇರಲಿಲ್ಲ. 16 ವರ್ಷದಳಾದ ಚಾರ್ಮೈನ್ ಕಳೆದ ಎರಡು ವರ್ಷಗಳಿಂದ ಜತೆಯಲ್ಲೇ ಸುತ್ತಾಡಿದ ಬಾಯ್ಫ್ರೆಂಡ್ನ ಮಗುವಿನ ಗರ್ಭಿಣಿಯಾಗಿದ್ದಳು. ಈ ವಿಷಯವನ್ನು ಆಕೆ ರಿಚರ್ಡ್ – ಜೆನ್ನಿಗೆ ತಿಳಿಸಿದಾಗ ಅವರ ವಯಸ್ಸು ಕ್ರಮವಾಗಿ 35 ಹಾಗೂ 34 ಮಾತ್ರವೇ.
ಅವರೇ ಇನ್ನೊಂದು ಮಗುವನ್ನು ಮಾಡಿಕೊಳ್ಳುವ ಆಲೋಚನೆಯಲ್ಲಿದ್ದಾಗ, ಮಗಳು ಗರ್ಭಿಣಿಯಾಗಿದ್ದಳು. ಆದರೂ ಅವರು ಕೋಪಗೊಳ್ಳದೆಯೇ ಆಕೆಗೆ ತಿಳಿಹೇಳಿ, ಮಗುವನ್ನು ಹೆರುವ ಬಗ್ಗೆ ತರಬೇತಿ ನೀಡುತ್ತಾ, ಆಕೆಯ ಪೋಷಣೆ ಶುರು ಮಾಡಿದರು.
ತಡೆರಹಿತ ʼಪಿಂಚಣಿʼಗಾಗಿ ಡಿಜಿಟಲ್ ಜೀವನ ಪ್ರಮಾಣ ಪತ್ರ ಪಡೆಯುವುದು ಈಗ ಇನ್ನಷ್ಟು ಸರಳ
2021ರ ಜೂನ್ನಲ್ಲಿ ಚಾರ್ಮೈನ್ ಗೆ ಮಗು ಜನಿಸಿತು. ಜೆನ್ನಿ-ರಿಚರ್ಡ್ ಅಜ್ಜಿ-ಅಜ್ಜಂದಿರೆನಿಸಿದರು. ಅದರೆ, ರಸ್ತೆಯಲ್ಲಿ ತಿರುಗಾಡುವಾಗ ಮಗುವು ಅವರ ಜತೆಗಿದ್ದರೆ, ಜನರು ಕೇಳುವ ಪ್ರಶ್ನೆ’ ನಿಮ್ಮ ಮಗುವೇ, ಎಷ್ಟು ಮುದ್ದಾಗಿದೆ. ಒಳ್ಳೆಯ ತಂದೆ-ತಾಯಿಯಾದ ನಿಮ್ಮ ಹೋಲಿಕೆಯೇ ಇದೆ,’ ಎಂದಂತೆ.
ನೋಡಿ, ಅಜ್ಜಿ-ಅಜ್ಜನ ಕೈನಲ್ಲಿರುವ ಮೊಮ್ಮಗವು ಸ್ವಂತ ಮಗು ಎನಿಸಿಕೊಳ್ಳುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜೆನ್ನಿ ಖುಷಿಯಿಂದ ಅನುಭವ ಹಂಚಿಕೊಂಡಿದ್ದಾರೆ.