ಅಮೆರಿಕದ ಪೋಲ್ ವಾಲ್ಟ್ ಆಟಗಾರ ಸ್ಯಾಮ್ ಕೆಂಡ್ರಿಕ್ಸ್ ಕೋವಿಡ್ ಸೋಂಕಿಗೆ ಒಳಗಾಗಿದ್ದು ಟೋಕಿಯೋ ಒಲಿಂಪಿಕ್ನಿಂದ ಹೊರನಡೆದಿದ್ದಾರೆ. ವಿಶ್ವ ಶ್ರೇಯಾಂಕಿತರಾಗಿದ್ದ ಸ್ಯಾಮ್ರನ್ನ ಪದಕ ಗೆಲ್ಲುವ ಸ್ಪರ್ಧಿ ಎಂದೇ ಪರಿಗಣಿಸಲಾಗಿತ್ತು.
ಅಮೆರಿಕ ಒಲಿಂಪಿಕ್ ಆಡಳಿತ ಮಂಡಳಿಯು ನೀಡಿರುವ ಮಾಹಿತಿಯ ಪ್ರಕಾರ ಕೋವಿಡ್ 19 ಸೋಂಕಿಗೆ ಒಳಗಾಗಿರುವ ಪೋಲ್ ವಾಲ್ಟರ್ ಸ್ಯಾಮ್ ಕೆಂಡ್ರಿಕ್ಸ್ ಟೋಕಿಯೋ ಒಲಿಂಪಿಕ್ಸ್ನಿಂದ ಹೊರನಡೆದಿದ್ದಾರೆ. ಸ್ಯಾಮ್ರನ್ನ ಹೋಟೆಲ್ಗೆ ಶಿಫ್ಟ್ ಮಾಡಲಾಗಿದ್ದು ಐಸೋಲೇಷನ್ನಲ್ಲಿ ಇಡಲಾಗಿದೆ ಎಂದು ಸ್ಯಾಮ್ ತಂದೆ ಹಾಗೂ ಕೋಚ್ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
250 ರೂ.ಗಿಂತ ಕಡಿಮೆ ಬೆಲೆಗೆ ಈ ಟೆಲಿಕಾಂ ಕಂಪನಿಗಳು ನೀಡ್ತಿವೆ ಭರ್ಜರಿ ಡೇಟಾ
ಕೊನೆಯ ಎರಡು ವರ್ಲ್ಡ್ ಚಾಂಪಿಯನ್ಶಿಪ್ನಲ್ಲಿ ಸ್ಯಾಮ್ ವಿಜೇತರಾಗಿದ್ದರು. 2016ರಲ್ಲಿ ಬ್ರೆಜಿಲ್ನ ರಿಯೋ ಡಿ ಜನೈರೋದಲ್ಲಿ ನಡೆದಿದ್ದ ಬೇಸಿಗೆ ಒಲಿಂಪಿಕ್ನಲ್ಲಿ ಸ್ಯಾಮ್ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದರು.
ಮೂಲಗಳಿಂದ ಬಂದಿರುವ ಮಾಹಿತಿಯ ಪ್ರಕಾರ ಟೋಕಿಯೋ ಒಲಿಂಪಿಕ್ನಲ್ಲಿ ಕನಿಷ್ಟ ಮೂವರು ಹೊಸ ಆಟಗಾರರಲ್ಲಿ ಕೊರೊನಾ ಸೋಂಕು ವರದಿಯಾಗಿದ್ದು ಈ ಮೂಲಕ ಜುಲೈ 1ರಿಂದ ಒಟ್ಟು ಸೋಂಕಿತ ಆಟಗಾರರ ಸಂಖ್ಯೆ 20 ಆಗಿದೆ ಎಂದು ಅಂದಾಜಿಸಲಾಗಿದೆ.