ವಿಶ್ವದಾದ್ಯಂತ ಕೊರೊನಾ ವೈರಸ್ ಜನರ ಮೇಲೆ ಪರಿಣಾಮ ಬೀರಿದೆ. ಭಾರತದಲ್ಲಿ ಕೊರೊನಾ, ಜನರ ವಯಸ್ಸಿನ ಮೇಲೆ ಪರಿಣಾಮ ಬೀರಿದೆ. ಭಾರತೀಯರ ಜೀವಿತಾವಧಿಯು ಸುಮಾರು ಎರಡು ವರ್ಷಗಳಷ್ಟು ಕಡಿಮೆಯಾಗಿದೆ ಎಂದು ಹೊಸ ಅಧ್ಯಯನ ಬಹಿರಂಗಪಡಿಸಿದೆ.
ಪದವೀಧರರಿಗೆ ಗುಡ್ ನ್ಯೂಸ್: 2,000 ಪ್ರೊಬೇಷನರಿ ಆಫೀಸರ್ ಹುದ್ದೆಗಳಿಗೆ SBI ಅರ್ಜಿ
ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಮುಂಬೈನ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಪಾಪ್ಯುಲೇಶನ್ ಸ್ಟಡೀಸ್ ವಿಜ್ಞಾನಿಗಳು ವರದಿಯೊಂದನ್ನು ಸಿದ್ಧಪಡಿಸಿದ್ದಾರೆ. ಈ ವರದಿಯ ಪ್ರಕಾರ, ಪುರುಷರು ಮತ್ತು ಮಹಿಳೆಯರ ಜೀವಿತಾವಧಿ 2019 ರಲ್ಲಿ 69.5 ವರ್ಷಗಳಾಗಿತ್ತು. 2020 ರಲ್ಲಿ ಮಹಿಳೆಯರ ಜೀವಿತಾವಧಿ 69.8 ವರ್ಷಗಳಿಗೆ ಇಳಿದಿದೆ.
ಜೀವಿತಾವಧಿ ಅಂದರೆ ಜನರ ಬದುಕುಳಿಯುವಿಕೆಯ ಸರಾಸರಿ. ಇದು ವ್ಯಕ್ತಿಯ ಸರಾಸರಿ ಜೀವನದ ಅಂದಾಜನ್ನು ಹೇಳುತ್ತದೆ. 35-69 ವಯಸ್ಸಿನ ಪುರುಷರ ಮೇಲೆ ಇದು ಹೆಚ್ಚಿನ ಪರಿಣಾಮ ಬೀರಿದೆ. ಉಳಿದ ವರ್ಷಗಳಿಗೆ ಹೋಲಿಸಿದರೆ 2020 ರಲ್ಲಿ 35-79 ವರ್ಷ ವಯಸ್ಸಿನೊಳಗಿನ ಹೆಚ್ಚಿನ ಜನರು ಕೊರೊನಾ ಸೋಂಕಿಗೆ ಸಾವನ್ನಪ್ಪಿದ್ದಾರೆ.
ದಾಖಲೆ ಮಟ್ಟದಲ್ಲಿ ಏರಿಕೆ ಕಂಡ ಐಸಿಐಸಿಐ ಬ್ಯಾಂಕ್ ಷೇರು
ಲಸಿಕೆ, ಮಾನಸಿಕ ಹಾಗೂ ದೈಹಿಕ ಆರೋಗ್ಯದ ಜೊತೆ ಉತ್ತಮ ಆಹಾರ ಸೇವನೆಯಿಂದ ಜೀವಿತಾವಧಿಯನ್ನು ಹೆಚ್ಚಿಸಬಹುದು ಎನ್ನಲಾಗ್ತಿದೆ.