alex Certify BIG NEWS: 16 ಜಿಲ್ಲೆಗಳಲ್ಲಿ ಕಡಿಮೆ, 10 ಜಿಲ್ಲೆಗಳಲ್ಲಿ ಅಧಿಕ ಸೋಂಕು: ಇಲ್ಲಿದೆ ಎಲ್ಲ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 16 ಜಿಲ್ಲೆಗಳಲ್ಲಿ ಕಡಿಮೆ, 10 ಜಿಲ್ಲೆಗಳಲ್ಲಿ ಅಧಿಕ ಸೋಂಕು: ಇಲ್ಲಿದೆ ಎಲ್ಲ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇವತ್ತು 1453 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 29,36,077 ಕ್ಕೆ ಏರಿಕೆಯಾಗಿದೆ.

ಇದುವರೆಗೆ 28,77,785 ಜನ ಗುಣಮುಖರಾಗಿದ್ದು, 37,105 ಸೋಂಕಿತರು ಸಾವನ್ನಪ್ಪಿದ್ದಾರೆ. ಇಂದು 1408 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 17 ಸೋಂಕಿತರು ಸಾವನ್ನಪ್ಪಿದ್ದಾರೆ. ಪಾಸಿಟಿವಿಟಿ ದರ ಶೇಕಡ 0.83 ರಷ್ಟು ಇದೆ. ಇವತ್ತು 1,73,000 ಪರೀಕ್ಷೆ ನಡೆಸಲಾಗಿದೆ. 21,161 ಸಕ್ರಿಯ ಪ್ರಕರಣಗಳು ಇವೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದು 352 ಜನರಿಗೆ ಸೋಂಕು ತಗಲಿದ್ದು, 381 ಜನ ಬಿಡುಗಡೆಯಾಗಿದ್ದಾರೆ. ಓರ್ವ ಸೋಂಕಿತ ಸಾವನ್ನಪ್ಪಿದ್ದಾರೆ. 7912 ಸಕ್ರಿಯ ಪ್ರಕರಣಗಳು ಇವೆ.

ಜಿಲ್ಲೆಗಳಲ್ಲಿನ ಹೊಸ ಪ್ರಕರಣಗಳ ಸಂಖ್ಯೆ:

ಬಾಗಲಕೋಟೆ 3, ಬಳ್ಳಾರಿ 1, ಬೆಂಗಳೂರು ಗ್ರಾಮಾಂತರ 7, ಬೀದರ್ 3, ಚಾಮರಾಜನಗರ 0, ಚಿಕ್ಕಬಳ್ಳಾಪುರ 9, ಚಿತ್ರದುರ್ಗ 9, ಧಾರವಾಡ 4, ಗದಗ 2, ಹಾವೇರಿ 1, ಕಲ್ಬುರ್ಗಿ 3, ಕೊಪ್ಪಳ 2, ರಾಯಚೂರು 4, ರಾಮನಗರ 2, ವಿಜಯಪುರ 1 ಹಾಗೂ ಯಾದಗಿರಿ ಜಿಲ್ಲೆಯಲ್ಲಿ 1 ಪ್ರಕರಣ ವರದಿಯಾಗಿದೆ.

ಉತ್ತರಕನ್ನಡ 40, ಉಡುಪಿ 176, ಶಿವಮೊಗ್ಗ 53, ಮೈಸೂರು 87, ಕೊಡಗು 95, ಹಾಸನ 101, ದಕ್ಷಿಣಕನ್ನಡ 341, ಚಿಕ್ಕಮಗಳೂರು 45, ಬೆಂಗಳೂರು ನಗರ 352, ಬೆಳಗಾವಿ 46 ಜನರಿಗೆ ಸೋಂಕು ತಗುಲಿದೆ.

ಮೃತಪಟ್ಟವರ ಸಂಖ್ಯೆ:

ಬೆಂಗಳೂರು ನಗರ 1, ದಕ್ಷಿಣಕನ್ನಡ 6, ದಾವಣಗೆರೆ 1, ಧಾರವಾಡ 1, ಹಾವೇರಿ 1, ಕೋಲಾರ 1, ಮಂಡ್ಯ 1, ಮೈಸೂರು 2, ತುಮಕೂರು 1, ಉತ್ತರಕನ್ನಡ 2 ಸೇರಿ 17 ಸೋಂಕಿತರು ಸಾವನ್ನಪ್ಪಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...