alex Certify 4 ಜಿಲ್ಲೆಗಳಲ್ಲಿ ಶೂನ್ಯ, 6 ಜಿಲ್ಲೆಗಳಲ್ಲಿ ಅಧಿಕ ಮಂದಿಗೆ ಸೋಂಕು: ಇಲ್ಲಿದೆ ಜಿಲ್ಲಾವಾರು ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

4 ಜಿಲ್ಲೆಗಳಲ್ಲಿ ಶೂನ್ಯ, 6 ಜಿಲ್ಲೆಗಳಲ್ಲಿ ಅಧಿಕ ಮಂದಿಗೆ ಸೋಂಕು: ಇಲ್ಲಿದೆ ಜಿಲ್ಲಾವಾರು ವಿವರ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1229 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 29,45,993 ಕ್ಕೆ ಏರಿಕೆಯಾಗಿದೆ.

ಇಂದು 1289 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 28,89,809 ಜನ ಗುಣಮುಖರಾಗಿದ್ದಾರೆ. 13 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ಇದುವರೆಗೆ 37,261 ಜನ ಸಾವನ್ನಪ್ಪಿದ್ದಾರೆ. ಪಾಸಿಟಿವಿಟಿ ದರ ಶೇಕಡ 0.66 ರಷ್ಟು ಇದೆ. ಇವತ್ತು 1,83,642 ಪರೀಕ್ಷೆ ನಡೆಸಲಾಗಿದೆ. ರಾಜ್ಯದಲ್ಲಿ 18,897 ಸಕ್ರಿಯ ಪ್ರಕರಣಗಳು ಇವೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದು 310 ಜನರಿಗೆ ಸೋಂಕು ತಗುಲಿದ್ದು, 329 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇವತ್ತು ಬೆಂಗಳೂರಿನಲ್ಲಿ ಯಾವುದೇ ಸೋಂಕಿತರು ಮೃತಪಟ್ಟಿಲ್ಲ. 7322 ಸಕ್ರಿಯ ಪ್ರಕರಣಗಳು ಇವೆ.

ಜಿಲ್ಲಾವಾರು ಸೋಂಕಿತರ ವಿವರ

ಬೆಂಗಳೂರು 310, ದಕ್ಷಿಣಕನ್ನಡ 207, ಹಾಸನ 103, ಕೊಡಗು 75, ಮೈಸೂರು 82, ಶಿವಮೊಗ್ಗ 42, ತುಮಕೂರು 44, ಉಡುಪಿ 146, ಉತ್ತರಕನ್ನಡ 42 ಪ್ರಕರಣ ವರದಿಯಾಗಿದೆ.

ಬಾಗಲಕೋಟೆ 0, ಬಳ್ಳಾರಿ 5, ಬೀದರ್ 0, ಚಾಮರಾಜನಗರ 7, ಚಿಕ್ಕಬಳ್ಳಾಪುರ 4, ಧಾರವಾಡ 7, ಗದಗ 2, ಹಾವೇರಿ 3, ಕಲಬುರ್ಗಿ 2, ಕೊಪ್ಪಳ 2, ರಾಯಚೂರು 0, ರಾಮನಗರ 3, ವಿಜಯಪುರ 1, ಯಾದಗಿರಿ 0 ಪ್ರಕರಣ ವರದಿಯಾಗಿದೆ.

ಮೃತಪಟ್ಟವರ ಸಂಖ್ಯೆ

ಬೆಂಗಳೂರು ಗ್ರಾಮಾಂತರ 1. ಚಾಮರಾಜನಗರ 1. ದಕ್ಷಿಣಕನ್ನಡ 5, ಹಾಸನ 2, ಹಾವೇರಿ 1, ಕೋಲಾರ 1, ಶಿವಮೊಗ್ಗ 1, ಉಡುಪಿ 1 ಸೇರಿ ರಾಜ್ಯದಲ್ಲಿ ಇಂದು 13  ಸೋಂಕಿತರು ಮೃತಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...