alex Certify ರಾಜ್ಯದಲ್ಲಿಂದು ಕೊರೋನಾ ಭಾರಿ ಇಳಿಕೆ: ಬಹುತೇಕ ಜಿಲ್ಲೆಗಳಲ್ಲಿ ಶೂನ್ಯ, 254 ಜನರಿಗೆ ಸೋಂಕು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದಲ್ಲಿಂದು ಕೊರೋನಾ ಭಾರಿ ಇಳಿಕೆ: ಬಹುತೇಕ ಜಿಲ್ಲೆಗಳಲ್ಲಿ ಶೂನ್ಯ, 254 ಜನರಿಗೆ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 254 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ. 316 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಒಟ್ಟು ಸೋಂಕಿತರ ಸಂಖ್ಯೆ 29,89,014 ಕ್ಕೆ ಏರಿಕೆಯಾಗಿದೆ. ಇದುವರೆಗೆ 38,091 ಸೋಂಕಿತರು ಸಾವನ್ನಪ್ಪಿದ್ದಾರೆ. 29,42,588 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಪಾಸಿಟಿವಿಟಿ ದರ ಶೇಕಡ 0.33 ಇದೆ. ರಾಜ್ಯದಲ್ಲಿ 8306 ಸಕ್ರಿಯ ಪ್ರಕರಣಗಳು ಇವೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದು ಹೊಸದಾಗಿ 151 ಜನರಿಗೆ ಸೋಂಕು ತಗುಲಿದ್ದು, ಒಬ್ಬರು ಮೃತಪಟ್ಟಿದ್ದಾರೆ. 173 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 6401 ಸಕ್ರಿಯ ಪ್ರಕರಣಗಳು ಇವೆ.

ಜಿಲ್ಲಾವಾರು ಮಾಹಿತಿ:

ಬಾಗಲಕೋಟೆ 0, ಬಳ್ಳಾರಿ 0, ಬೀದರ್ 0, ಚಾಮರಾಜನಗರ 0, ಚಿಕ್ಕಬಳ್ಳಾಪುರ 0, ಚಿತ್ರದುರ್ಗ 1, ದಾವಣಗೆರೆ 0, ಧಾರವಾಡ 1, ಗದಗ 0, ಹಾವೇರಿ 0, ಕಲ್ಬುರ್ಗಿ 0, ಕೋಲಾರ 0, ಕೊಪ್ಪಳ 0, ರಾಯಚೂರು 1, ರಾಮನಗರ 1, ಶಿವಮೊಗ್ಗ 1, ವಿಜಯಪುರ 0, ಯಾದಗಿರಿ 0, ಬೆಂಗಳೂರು ನಗರ 151, ದಕ್ಷಿಣಕನ್ನಡ 12, ಮೈಸೂರು 19, ತುಮಕೂರು 11, ಉಡುಪಿ 11 ಉತ್ತರ ಕನ್ನಡ 12 ಹೊಸ ಪ್ರಕರಣ ವರದಿಯಾಗಿವೆ.

ಮೃತಪಟ್ಟವರ ಸಂಖ್ಯೆ:

ಬೆಂಗಳೂರು ನಗರ 1, ಉತ್ತರ ಕನ್ನಡ 1 ಸೇರಿ ರಾಜ್ಯದಲ್ಲಿ ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...