alex Certify BIG NEWS: 3 ಜಿಲ್ಲೆಗಳಲ್ಲಿ 0, ರಾಜ್ಯದಲ್ಲಿಂದು 1298 ಮಂದಿಗೆ ಸೋಂಕು – ಇಲ್ಲಿದೆ ಎಲ್ಲ ಜಿಲ್ಲೆಗಳ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 3 ಜಿಲ್ಲೆಗಳಲ್ಲಿ 0, ರಾಜ್ಯದಲ್ಲಿಂದು 1298 ಮಂದಿಗೆ ಸೋಂಕು – ಇಲ್ಲಿದೆ ಎಲ್ಲ ಜಿಲ್ಲೆಗಳ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1298 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 29,31,827 ಕ್ಕೆ ಏರಿಕೆಯಾಗಿದೆ. ಇವತ್ತು ಒಂದೇ ದಿನ 1833 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 28,73,281 ಜನ ಗುಣಮುಖರಾಗಿದ್ದಾರೆ. ಇಂದು 32 ಮಂದಿ ಸೋಂಕಿತರು ಮೃತಪಟ್ಟಿದ್ದು, ಇದುವರೆಗೆ 37,039 ಸೋಂಕಿತರು ಸಾವನ್ನಪ್ಪಿದ್ದಾರೆ.

21,481 ಸಕ್ರಿಯ ಪ್ರಕರಣಗಳು ಇವೆ. ಪಾಸಿಟಿವಿಟಿ ದರ ಶೇಕಡ 1.01 ರಷ್ಟು ಇದೆ. ರಾಜಧಾನಿ ಬೆಂಗಳೂರಿನಲ್ಲಿ ಇಂದು ಹೊಸದಾಗಿ 340 ಜನರಿಗೆ ಸೋಂಕು ತಗುಲಿದೆ. 10 ಜನ ಮೃತಪಟ್ಟಿದ್ದಾರೆ. 471 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, 7913 ಸಕ್ರಿಯ ಪ್ರಕರಣಗಳು ಇವೆ.

ಜಿಲ್ಲೆಗಳ ಮಾಹಿತಿ:

ಬಾಗಲಕೋಟೆ 0, ಬಳ್ಳಾರಿ 5, ಬಿದರ್ 0, ಚಾಮರಾಜನಗರ 7, ಚಿಕ್ಕಬಳ್ಳಾಪುರ 2, ಚಿತ್ರದುರ್ಗ 7, ಧಾರವಾಡ 5, ಗದಗ 1, ಹಾವೇರಿ 1, ಕಲ್ಬುರ್ಗಿ 4, ಕೊಪ್ಪಳ 1, ರಾಯಚೂರು 0, ರಾಮನಗರ 3, ವಿಜಯಪುರ 2, ಯಾದಗಿರಿ 3 ಪ್ರಕರಣ ವರದಿಯಾಗಿವೆ.

ಬೆಂಗಳೂರು ನಗರ 340, ಚಿಕ್ಕಮಗಳೂರು 59, ದಕ್ಷಿಣಕನ್ನಡ 288, ಹಾಸನ 66, ಮೈಸೂರು 88, ಶಿವಮೊಗ್ಗ 51, ತುಮಕೂರು 52, ಉಡುಪಿ 122, ಉತ್ತರಕನ್ನಡ 48 ಜನರಿಗೆ ಸೋಂಕು ತಗುಲಿದೆ.

ಮೃತರ ಸಂಖ್ಯೆ:

ಬಳ್ಳಾರಿ 1, ಬೆಳಗಾವಿ 1, ಬೆಂಗಳೂರು ನಗರ 10, ದಕ್ಷಿಣ ಕನ್ನಡ 5, ದಾವಣಗೆರೆ 1, ಹಾಸನ 2, ಕೊಡಗು 2, ಕೋಲಾರ 2, ಮಂಡ್ಯ 1, ಮೈಸೂರು 2, ಶಿವಮೊಗ್ಗ 2, ತುಮಕೂರು, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...