alex Certify ಜಿಲ್ಲೆಗಳಲ್ಲೂ ಕೊರೋನಾ ಭಾರಿ ಇಳಿಕೆ: ಇಲ್ಲಿದೆ ಡಿಟೇಲ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಲ್ಲೆಗಳಲ್ಲೂ ಕೊರೋನಾ ಭಾರಿ ಇಳಿಕೆ: ಇಲ್ಲಿದೆ ಡಿಟೇಲ್ಸ್

ಬೆಂಗಳೂರು: ರಾಜ್ಯದಲ್ಲಿ ಇಂದು 767 ಜನರಿಗೆ ಕೊರೋನಾ ಸೋಂಕು ತಗುಲಿದ್ದು, 29 ಜನ ಮೃತಪಟ್ಟಿದ್ದಾರೆ. 1692 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ರಾಜ್ಯದಲ್ಲಿ 10,406 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ದರ ಶೇಕಡ 1.31 ರಷ್ಟು ಇದೆ. ಇದುವರೆಗೆ 38,87,744 ಜನ ಗುಣಮುಖರಾಗಿದ್ದಾರೆ. 39,845 ಸೋಂಕಿತರು ಮೃತಪಟ್ಟಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 39,38,032 ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಇಂದು 552 ಜನರಿಗೆ ಸೋಂಕು ತಗುಲಿದ್ದು, 14 ಮಂದಿ ಮೃತಪಟ್ಟಿದ್ದಾರೆ. 916 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 5255 ಸಕ್ರಿಯ ಪ್ರಕರಣಗಳು ಇವೆ.

ಬಳ್ಳಾರಿ 10, ಬೆಳಗಾವಿ 22, ದಕ್ಷಿಣಕನ್ನಡ 20, ಧಾರವಾಡ 10, ಕೊಡಗು 14, ಮೈಸೂರು 23, ಶಿವಮೊಗ್ಗ 10, ತುಮಕೂರು 21, ಉಡುಪಿ 15 ಹೊಸ ಪ್ರಕರಣಗಳು ವರದಿಯಾಗಿವೆ.

ಬೆಂಗಳೂರಿನಲ್ಲಿ 14, ದಕ್ಷಿಣಕನ್ನಡ 3, ಧಾರವಾಡ 2, ತುಮಕೂರು 2, ಉಡುಪಿ 2 ಸೇರಿ ರಾಜ್ಯದಲ್ಲಿ 29 ಸೋಂಕಿತರು ಮೃತಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...