alex Certify BIG NEWS: ರಾಜ್ಯದಲ್ಲಿಂದು 1568 ಜನರಿಗೆ ಸೋಂಕು; ಬೆಂಗಳೂರು, ಶಿವಮೊಗ್ಗದಲ್ಲಿ ಅಧಿಕ ಕೇಸ್ –ಇಲ್ಲಿದೆ ಡಿಟೇಲ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಾಜ್ಯದಲ್ಲಿಂದು 1568 ಜನರಿಗೆ ಸೋಂಕು; ಬೆಂಗಳೂರು, ಶಿವಮೊಗ್ಗದಲ್ಲಿ ಅಧಿಕ ಕೇಸ್ –ಇಲ್ಲಿದೆ ಡಿಟೇಲ್ಸ್

ಬೆಂಗಳೂರು: ರಾಜ್ಯದಲ್ಲಿ ಇಂದು 1568 ಜನರಿಗೆ ಕೊರೋನಾ ಸೋಂಕು ತಗುಲಿದೆ. 25 ಜನ ಸೋಂಕಿತರು ಮೃತಪಟ್ಟಿದ್ದಾರೆ. 6025 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಇದುವರೆಗೆ 38,57,323 ಜನ ಗುಣಮುಖರಾಗಿದ್ದು, 39,665 ಜನ ಸೋಂಕಿತರು ಮೃತಪಟ್ಟಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 39,28,237 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ 31,215 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ದರ ಶೇಕಡ 2.25 ರಷ್ಟು ಇದೆ.

ಬೆಂಗಳೂರಿನಲ್ಲಿ ಇಂದು 754 ಜನರಿಗೆ ಕೊರೋನಾ ಸೋಂಕು ತಗುಲಿದ್ದು, 5 ಜನ ಸೋಂಕಿತರು ಮೃತಪಟ್ಟಿದ್ದಾರೆ. 2089 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 12,890 ಸಕ್ರಿಯ ಪ್ರಕರಣಗಳಿವೆ.

ಬಳ್ಳಾರಿ 50, ಬೆಳಗಾವಿ 63, ದಕ್ಷಿಣಕನ್ನಡ 55, ಮೈಸೂರು 78, ಶಿವಮೊಗ್ಗ 91 ಹೊಸ ಪ್ರಕರಣ ವರದಿಯಾಗಿವೆ.

ಬೆಳಗಾವಿ 2, ಬೆಂಗಳೂರು ನಗರ 5, ಬೀದರ್ 2, ದಕ್ಷಿಣಕನ್ನಡ 2, ಧಾರವಾಡ 2, ತುಮಕೂರು 2, ಉಡುಪಿ 2 ಸೇರಿ ರಾಜ್ಯದಲ್ಲಿ 25 ಸೋಂಕಿತರು ಮೃತಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...