alex Certify BIG NEWS: ಬೆಂಗಳೂರು 2315 ಸೇರಿ ರಾಜ್ಯದಲ್ಲಿಂದು 5019 ಜನರಿಗೆ ಸೋಂಕು ದೃಢ, 39 ಜನ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬೆಂಗಳೂರು 2315 ಸೇರಿ ರಾಜ್ಯದಲ್ಲಿಂದು 5019 ಜನರಿಗೆ ಸೋಂಕು ದೃಢ, 39 ಜನ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 5019 ಜನರಿಗೆ ಕೊರೊನಾ ಸೋಂಕು ತಗುಲಿದೆ. 39 ಸೋಂಕಿತರು ಮೃತಪಟ್ಟಿದ್ದು, 13,923 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ರಾಜ್ಯದಲ್ಲಿ 52,013 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ದರ ಶೇಕಡ 4.25 ರಷ್ಟು ಇದೆ. ರಾಜ್ಯದಲ್ಲಿ ಇಂದು 1,17,956 ಪರೀಕ್ಷೆ ನಡೆಸಲಾಗಿದೆ.

ಬೆಂಗಳೂರಿನಲ್ಲಿ ಇಂದು 2315 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 17 ಸೋಂಕಿತರು ಮೃತಪಟ್ಟಿದ್ದಾರೆ. 21 ಸಾವಿರಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿವೆ. ಬೆಂಗಳೂರಿನಲ್ಲಿ ಪಾಸಿಟಿವಿಟಿ ದರ ಶೇಕಡ 4 ರಷ್ಟು ಇದೆ. ಬೆಂಗಳೂರಿನಲ್ಲಿ ಪಾಸಿಟಿವಿಟಿ ದರ ಶೇಕಡ 4 ರಷ್ಟು ಇದೆ. ಬೆಂಗಳೂರಿನಲ್ಲಿ 20,970 ಸಕ್ರಿಯ ಪ್ರಕರಣಗಳು ಇವೆ.

ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 39,17,119 ಕ್ಕೆ ಏರಿಕೆಯಾಗಿದೆ. ಇದುವರೆಗೆ 39,534 ಜನ ಮೃತಪಟ್ಟಿದ್ದಾರೆ. 38,25,538 ಜನ ಗುಣಮುಖರಾಗಿದ್ದಾರೆ.

ಬಳ್ಳಾರಿ 220, ಬೆಳಗಾವಿ 196, ಧಾರವಾಡ 124, ಹಾಸನ 101, ಕೊಡಗು 171, ಮಂಡ್ಯ 117, ಮೈಸೂರು 261, ಶಿವಮೊಗ್ಗ 141, ತುಮಕೂರು 234 ಹೊಸ ಪ್ರಕರಣ ವರದಿಯಾಗಿವೆ.

ಬೆಂಗಳೂರು ನಗರ 17. ದಕ್ಷಿಣ ಕನ್ನಡ 3. ಧಾರವಾಡ 2, ಮೈಸೂರು 2. ತುಮಕೂರು 5 ಸೇರಿ ರಾಜ್ಯದಲ್ಲಿ 39 ಸೋಂಕಿತರು ಮೃತಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...