alex Certify ರಾಜ್ಯದಲ್ಲಿಂದು ಕೊರೋನಾ ಭಾರೀ ಇಳಿಕೆ: 10 ಜಿಲ್ಲೆಗಳಲ್ಲಿ ಶೂನ್ಯ, ಇಲ್ಲಿದೆ ಸಂಪೂರ್ಣ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದಲ್ಲಿಂದು ಕೊರೋನಾ ಭಾರೀ ಇಳಿಕೆ: 10 ಜಿಲ್ಲೆಗಳಲ್ಲಿ ಶೂನ್ಯ, ಇಲ್ಲಿದೆ ಸಂಪೂರ್ಣ ವಿವರ

ಬೆಂಗಳೂರು: ರಾಜ್ಯದಲ್ಲಿಂದು ಹೊಸದಾಗಿ 397 ಜನರಿಗೆ ಕೊರೊನಾ ಸೋಂಕು ತಗುಲಿದೆ. 693 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 13 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.

ಒಟ್ಟು ಸೋಂಕಿತರ ಸಂಖ್ಯೆ 29,78,286 ಕ್ಕೆ ಏರಿಕೆಯಾಗಿದೆ. ಇದುವರೆಗೆ 37,832 ಜನ ಸಾವನ್ನಪ್ಪಿದ್ದಾರೆ. 29,28,433 ಜನ ಗುಣಮುಖರಾಗಿದ್ದಾರೆ.

11,992 ಸಕ್ರಿಯ ಪ್ರಕರಣಗಳು ಇವೆ. ಇವತ್ತು 78,958 ಪರೀಕ್ಷೆ ನಡೆಸಲಾಗಿದ್ದು, ಪಾಸಿಟಿವಿಟಿ ದರ ಶೇಕಡ 0.50 ರಷ್ಟು ಇದೆ. ರಾಜಧಾನಿ ಬೆಂಗಳೂರಿನಲ್ಲಿ 166 ಜನರಿಗೆ ಸೋಂಕು ತಗುಲಿದ್ದು, 121 ಜನ ಬಿಡುಗಡೆಯಾಗಿದ್ದಾರೆ. 5 ಜನ ಮೃತಪಟ್ಟಿದ್ದಾರೆ. 7640 ಸಕ್ರಿಯ ಪ್ರಕರಣಗಳು ಇವೆ.

ಜಿಲ್ಲಾವಾರು ಮಾಹಿತಿ:

ಬೆಂಗಳೂರು ನಗರ 166, ದಕ್ಷಿಣಕನ್ನಡ 45, ಹಾಸನ 33, ಮೈಸೂರು 40, ಬಾಗಲಕೋಟೆ, ಬೀದರ್, ಚಿಕ್ಕಬಳ್ಳಾಪುರ, ದಾವಣಗೆರೆ, ಧಾರವಾಡ, ಗದಗ, ಕೊಪ್ಪಳ, ರಾಮನಗರ, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ವರದಿಯಾಗಿದೆ.

ಕೋವಿಡ್ ನಿಂದ ಮೃತಪಟ್ಟವರ ಸಂಖ್ಯೆ:

ಬೆಂಗಳೂರು ನಗರ 5, ಚಿತ್ರದುರ್ಗ 1, ದಕ್ಷಿಣ ಕನ್ನಡ 3, ರಾಯಚೂರು 1, ಶಿವಮೊಗ್ಗ 1, ತುಮಕೂರು 1 ಸೇರಿ ರಾಜ್ಯದಲ್ಲಿಂದು 13 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...