alex Certify BIG BREAKING: 1431 ಮಂದಿಗೆ ಕೊರೋನಾ, 6 ಜಿಲ್ಲೆಗಳಲ್ಲಿ ಅಧಿಕ -ಇಲ್ಲಿದೆ ಎಲ್ಲ ಜಿಲ್ಲೆಗಳ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: 1431 ಮಂದಿಗೆ ಕೊರೋನಾ, 6 ಜಿಲ್ಲೆಗಳಲ್ಲಿ ಅಧಿಕ -ಇಲ್ಲಿದೆ ಎಲ್ಲ ಜಿಲ್ಲೆಗಳ ವಿವರ

ಬೆಂಗಳೂರು: ರಾಜ್ಯದಲ್ಲಿ ಇಂದು 1431 ಜನರಿಗೆ ಸೋಂಕು ತಗುಲಿದೆ. ಒಟ್ಟು ಸೋಂಕಿತರ ಸಂಖ್ಯೆ 29,29,464 ಕ್ಕೆ ಏರಿಕೆಯಾಗಿದೆ. ಇಂದು 1611 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 28,69,962 ಜನ ಗುಣಮುಖರಾಗಿದ್ದಾರೆ.

ಇವತ್ತು 21 ಸೋಂಕಿತರು ಮೃತಪಟ್ಟಿದ್ದು, ಇದುವರೆಗೆ 36,979 ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 22,497 ಸಕ್ರಿಯ ಪ್ರಕರಣಗಳು ಇವೆ. ಪಾಸಿಟಿವಿಟಿ ದರ ಶೇಕಡ 0.93 ರಷ್ಟು ಇದೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದು 305 ಜನರಿಗೆ ಸೋಂಕು ತಗುಲಿದೆ. 336 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಮೂವರು ಮೃತಪಟ್ಟಿದ್ದಾರೆ. 8166 ಸಕ್ರಿಯ ಪ್ರಕರಣಗಳಿವೆ.

ಜಿಲ್ಲಾವಾರು ವಿವರ

ಬಾಗಲಕೋಟೆ 2, ಬಳ್ಳಾರಿ 5, ಬೀದರ್ 3, ಚಿಕ್ಕಬಳ್ಳಾಪುರ 5, ದಾವಣಗೆರೆ 3, ಗದಗ 4, ಹಾವೇರಿ 3, ಕಲಬುರ್ಗಿ 3, ಕೊಪ್ಪಳ 1, ರಾಯಚೂರು 4, ರಾಮನಗರ 6, ವಿಜಯಪುರ 1, ಯಾದಗಿರಿ 0 ಪ್ರಕರಣ ದಾಖಲಾಗಿದೆ.

ಬೆಂಗಳೂರು 305, ದಕ್ಷಿಣ ಕನ್ನಡ 311, ಹಾಸನ 87, ಕೊಡಗು 82, ಮೈಸೂರು 83, ತುಮಕೂರು 51, ಉಡುಪಿ 177, ಉತ್ತರಕನ್ನಡ 64 ಹೊಸ ಪ್ರಕರಣಗಳು ವರದಿಯಾಗಿದೆ.

ಮೃತಪಟ್ಟವರ ಸಂಖ್ಯೆ

ಬೆಳಗಾವಿ 1, ಬೆಂಗಳೂರು ನಗರ 3, ಚಿತ್ರದುರ್ಗ 2, ದಕ್ಷಿಣ ಕನ್ನಡ 4, ಹಾಸನ 3, ಕೊಡಗು 1, ಕೋಲಾರ 2, ಮಂಡ್ಯ 1, ಮೈಸೂರು 1, ಉಡುಪಿ 2, ಉತ್ತರಕನ್ನಡ 1 ಸೇರಿದಂತೆ ರಾಜ್ಯದಲ್ಲಿಂದು 21 ಸೋಂಕಿತರು ಮೃತಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...