alex Certify BIG NEWS: ದಕ್ಷಿಣ ಕನ್ನಡದಲ್ಲಿ ಕೊರೋನಾ ಭಾರಿ ಹೆಚ್ಚಳ, ಇಲ್ಲಿದೆ ಜಿಲ್ಲೆಗಳ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ದಕ್ಷಿಣ ಕನ್ನಡದಲ್ಲಿ ಕೊರೋನಾ ಭಾರಿ ಹೆಚ್ಚಳ, ಇಲ್ಲಿದೆ ಜಿಲ್ಲೆಗಳ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೊನಾ ಸೋಂಕು ಮತ್ತಷ್ಟು ಹೆಚ್ಚಳವಾಗಿದೆ. ಇಂದು ಹೊಸದಾಗಿ 1826 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 29,22,875 ಕ್ಕೆ ಏರಿಕೆಯಾಗಿದೆ.

1618 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 28,63,117 ಜನ ಗುಣಮುಖರಾಗಿದ್ದಾರೆ. ಇವತ್ತು 33 ಮಂದಿ ಸೋಂಕಿತರು ಮೃತಪಟ್ಟಿದ್ದು, ಇದುವರೆಗೆ 36,881 ಜನ ಸಾವನ್ನಪ್ಪಿದ್ದಾರೆ. 22,851 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ದರ ಶೇಕಡ 1.09 ರಷ್ಟು ಇದೆ. ಇವತ್ತು 1,67,237 ಪರೀಕ್ಷೆ ನಡೆಸಲಾಗಿದೆ.

ಬೆಂಗಳೂರಿನಲ್ಲಿಂದು 377 ಜನರಿಗೆ ಸೋಂಕು ತಗುಲಿದೆ. 280 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 5 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. 8290 ಸಕ್ರಿಯ ಪ್ರಕರಣಗಳಿವೆ.

ಜಿಲ್ಲಾವಾರು ಮಾಹಿತಿ:

ಬಾಗಲಕೋಟೆ 3, ಬೀದರ್ 0, ಚಿಕ್ಕಬಳ್ಳಾಪುರ 7, ಗದಗ 0, ಹಾವೇರಿ 5, ಕಲಬುರ್ಗಿ 4, ಕೊಪ್ಪಳ 4, ರಾಯಚೂರು 2, ರಾಮನಗರ 6, ವಿಜಯಪುರ 2, ಯಾದಗಿರಿ 3. ಬೆಂಗಳೂರು ನಗರ 377, ದಕ್ಷಿಣಕನ್ನಡ 422, ಹಾಸನ 175, ಕೊಡಗು 71, ಮೈಸೂರು 118, ತುಮಕೂರು 88, ಉಡುಪಿ 130, ಉತ್ತರಕನ್ನಡ 79 ಜನರಿಗೆ ಸೋಂಕು ತಗುಲಿದೆ.

ಮೃತಪಟ್ಟವರ ಸಂಖ್ಯೆ:

ಬೆಳಗಾವಿ 3, ಬೆಂಗಳೂರು ಗ್ರಾಮಾಂತರ 1, ಬೆಂಗಳೂರು ನಗರ 5, ಚಿತ್ರದುರ್ಗ 2, ದಕ್ಷಿಣಕನ್ನಡ 5, ಹಾಸನ 3, ಕೊಡಗು 2, ಕೋಲಾರ 3, ಮಂಡ್ಯ 2, ಮೈಸೂರು 3, ಶಿವಮೊಗ್ಗ 1, ಉಡುಪಿ 1, ಉತ್ತರಕನ್ನಡ 2 ಸೇರಿ ರಾಜ್ಯದಲ್ಲಿಂದು 33 ಮಂದಿ ಸೋಂಕಿತರುಮೃತಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...