alex Certify BIG BREAKING: 6 ಜಿಲ್ಲೆಗಳಲ್ಲಿ ಕೊರೋನಾ ಭಾರಿ ಹೆಚ್ಚಳ, ಇಲ್ಲಿದೆ ಜಿಲ್ಲೆಗಳ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: 6 ಜಿಲ್ಲೆಗಳಲ್ಲಿ ಕೊರೋನಾ ಭಾರಿ ಹೆಚ್ಚಳ, ಇಲ್ಲಿದೆ ಜಿಲ್ಲೆಗಳ ವಿವರ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1769 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 29,11,727 ಕ್ಕೆ ಏರಿಕೆಯಾಗಿದೆ.

ಇದುವರೆಗೆ 28,50,717 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 36,680 ಮಂದಿ ಸಾವನ್ನಪ್ಪಿದ್ದಾರೆ.   ಇಂದು 1714 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 30 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. 24,305 ಸಕ್ರಿಯ ಪ್ರಕರಣಗಳು ಇವೆ. ಪಾಸಿಟಿವಿಟಿ ದರ ಶೇಕಡ 1.04 ರಷ್ಟು ಇದೆ. ಇವತ್ತು 1,69,411 ಪರೀಕ್ಷೆ ನಡೆಸಲಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದು 411 ಜನರಿಗೆ ಸೋಂಕು ತಗುಲಿದ್ದು, 688 ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 4 ಸೋಂಕಿತರು ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ 8705 ಸಕ್ರಿಯ ಪ್ರಕರಣಗಳು ಇವೆ.

ಜಿಲ್ಲಾವಾರು ಮಾಹಿತಿ:

ಬಾಗಲಕೋಟೆ 6, ಬಳ್ಳಾರಿ 9, ಬೆಳಗಾವಿ 31, ಬೆಂಗಳೂರು ಗ್ರಾಮಾಂತರ 22, ಬೆಂಗಳೂರು ನಗರ 411, ಬೀದರ 2, ಚಾಮರಾಜನಗರ 33, ಚಿಕ್ಕಬಳ್ಳಾಪುರ 7, ಚಿಕ್ಕಮಗಳೂರು 67, ಚಿತ್ರದುರ್ಗ 25, ದಕ್ಷಿಣಕನ್ನಡ 350, ದಾವಣಗೆರೆ 10, ಧಾರವಾಡ 8, ಗದಗ 1, ಹಾಸನ 112, ಹಾವೇರಿ 0, ಕಲಬುರ್ಗಿ 2, ಕೊಡಗು 99, ಕೋಲಾರ 49, ಕೊಪ್ಪಳ 3, ಮಂಡ್ಯ 43, ಮೈಸೂರು 143, ರಾಯಚೂರು 1, ರಾಮನಗರ 10, ಶಿವಮೊಗ್ಗ 38, ತುಮಕೂರು 53, ಉಡುಪಿ 140, ಉತ್ತರಕನ್ನಡ 86, ವಿಜಯಪುರ 8, ಯಾದಗಿರಿ 0 ಪ್ರಕರಣಗಳು ಪತ್ತೆಯಾಗಿವೆ.

ಬೆಳಗಾವಿ 1, ಬೆಂಗಳೂರು ಗ್ರಾಮಾಂತರ 1, ಬೆಂಗಳೂರು ನಗರ 4, ಚಾಮರಾಜನಗರ 1, ಚಿತ್ರದುರ್ಗ 1, ದಕ್ಷಿಣಕನ್ನಡ 6, ಹಾಸನ 2, ಕೋಲಾರ 2, ಮಂಡ್ಯ 3, ಮೈಸೂರು 4, ತುಮಕೂರು 1, ಉಡುಪಿ 2, ವಿಜಯಪುರ 2 ಜನ ಸೇರಿದಂತೆ ರಾಜ್ಯದಲ್ಲಿ ಎಂದು 30 ಸೋಂಕಿತರು ಮೃತಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...