alex Certify BIG NEWS: 3 ಜಿಲ್ಲೆಗಳಲ್ಲಿ ಕೊರೋನಾ ಶೂನ್ಯ, 5 ಜಿಲ್ಲೆಗಳಲ್ಲಿ ಉಲ್ಬಣ –ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 3 ಜಿಲ್ಲೆಗಳಲ್ಲಿ ಕೊರೋನಾ ಶೂನ್ಯ, 5 ಜಿಲ್ಲೆಗಳಲ್ಲಿ ಉಲ್ಬಣ –ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಬೆಂಗಳೂರು: ರಾಜ್ಯದಲ್ಲಿ ಇಂದು 1674 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 29,09,958 ಕ್ಕೆ ಏರಿಕೆಯಾಗಿದೆ.

ಇದುವರೆಗೆ 36,650 ಸೋಂಕಿತರು ಸಾವನ್ನಪ್ಪಿದ್ದಾರೆ. 28,49,003 ಜನ ಗುಣಮುಖರಾಗಿದ್ದಾರೆ. ಇಂದು 1376 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 38 ಸೋಂಕಿತರು ಸಾವನ್ನಪ್ಪಿದ್ದಾರೆ. ಪಾಸಿಟಿವಿಟಿ ದರ ಶೇಕಡ 1.38 ರಷ್ಟು ಇದೆ. 24,280 ಸಕ್ರಿಯ ಪ್ರಕರಣಗಳು ಇದ್ದು, ಇವತ್ತು 1,21,021 ಪರೀಕ್ಷೆ ನಡೆಸಲಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ 477 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, 154 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 7 ಮಂದಿ ಸೋಂಕಿತರು ಇಂದು ಮೃತಪಟ್ಟಿದ್ದಾರೆ.

ಜಿಲ್ಲೆಗಳ ವಿವರ:

ಬಾಗಲಕೋಟೆ 1, ಬಳ್ಳಾರಿ 8, ಬೆಳಗಾವಿ 36, ಬೆಂಗಳೂರು ಗ್ರಾಮಾಂತರ 21, ಬೆಂಗಳೂರು ನಗರ 477, ಬೀದರ್ 0, ಚಾಮರಾಜನಗರ 19, ಚಿಕ್ಕಬಳ್ಳಾಪುರ 6, ಚಿಕ್ಕಮಗಳೂರು 61, ಚಿತ್ರದುರ್ಗ 15, ದಕ್ಷಿಣ ಕನ್ನಡ 307, ದಾವಣಗೆರೆ 12, ಧಾರವಾಡ 9, ಗದಗ 3, ಹಾಸನ 104, ಹಾವೇರಿ 1, ಕಲಬುರಗಿ 3, ಕೊಡಗು 94, ಕೋಲಾರ 17, ಕೊಪ್ಪಳ 4, ಮಂಡ್ಯ 44, ಮೈಸೂರು 147, ರಾಯಚೂರು 0, ರಾಮನಗರ 11, ಶಿವಮೊಗ್ಗ 26, ತುಮಕೂರು 80, ಉಡುಪಿ 104, ಉತ್ತರಕನ್ನಡ 60, ವಿಜಯಪುರ 4, ಯಾದಗಿರಿ 0.

ಮೃತಪಟ್ಟವರ ಸಂಖ್ಯೆ:

ಬಳ್ಳಾರಿ 1, ಬೆಳಗಾವಿ 1, ಬೆಂಗಳೂರು ನಗರ 7, ಚಿಕ್ಕಬಳ್ಳಾಪುರ 2, ಚಿಕ್ಕಮಗಳೂರು 1, ದಕ್ಷಿಣಕನ್ನಡ 8, ಧಾರವಾಡ 2, ಗದಗ 1, ಹಾಸನ 2, ಕೊಡಗು 1, ಕೋಲಾರ 2, ಮೈಸೂರು 4, ರಾಯಚೂರು 1, ಶಿವಮೊಗ್ಗ 1, ತುಮಕೂರು 2, ಉಡುಪಿ 1, ಉತ್ತರಕನ್ನಡ 1 ಸಾವಿನ ಪ್ರಕರಣ ವರದಿಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...