alex Certify BREAKING: ರಾಜ್ಯದಲ್ಲಿಂದು ಕೊರೋನಾ ಮತ್ತಷ್ಟು ಹೆಚ್ಚಳ, 629 ಜನರಿಗೆ ಸೋಂಕು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ರಾಜ್ಯದಲ್ಲಿಂದು ಕೊರೋನಾ ಮತ್ತಷ್ಟು ಹೆಚ್ಚಳ, 629 ಜನರಿಗೆ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 629 ಜನರಿಗೆ ಸೋಂಕು ತಗುಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 29,74,528 ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಇಂದು 17 ಜನ ಮೃತಪಟ್ಟಿದ್ದು, ಇದುವರೆಗೆ 37,763 ಜನ ಸಾವನ್ನಪ್ಪಿದ್ದಾರೆ. ಇವತ್ತು 782 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 29,24,102 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ 12,634 ಸಕ್ರಿಯ ಪ್ರಕರಣಗಳು ಇವೆ. ಪಾಸಿಟಿವಿಟಿ ದರ ಶೇಕಡ 0.67 ರಷ್ಟು ಇದೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದು ಹೊಸದಾಗಿ 229 ಜನರಿಗೆ ಸೋಂಕು ತಗುಲಿದ್ದು, 199 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 6 ಜನ ಸಾವನ್ನಪ್ಪಿದ್ದಾರೆ. 7418 ಸಕ್ರಿಯ ಪ್ರಕರಣಗಳು ಇವೆ.

ಜಿಲ್ಲಾವಾರು ಮಾಹಿತಿ:

ಬಾಗಲಕೋಟೆ 1, ಬಳ್ಳಾರಿ 2, ಬೀದರ್ 0, ಚಾಮರಾಜನಗರ 5, ಚಿಕ್ಕಬಳ್ಳಾಪುರ 1, ಚಿತ್ರದುರ್ಗ 5, ದಾವಣಗೆರೆ 1, ಗದಗ 0, ಹಾವೇರಿ 2, ಕಲಬುರ್ಗಿ 0, ಕೋಲಾರ 5, ಕೊಪ್ಪಳ 0, ರಾಯಚೂರು 0, ರಾಮನಗರ 2, ವಿಜಯಪುರ 0, ಯಾದಗಿರಿ 0, ಬೆಂಗಳೂರು ನಗರ 229, ದಕ್ಷಿಣಕನ್ನಡ 96, ಹಾಸನ 27, ಕೊಡಗು 30, ಮೈಸೂರು 58, ಉಡುಪಿ 39 ಹೊಸ ಪ್ರಕರಣ ವರದಿಯಾಗಿವೆ.

ಮೃತಪಟ್ಟವರ ಸಂಖ್ಯೆ:

ಬೆಳಗಾವಿ 3, ಬೆಂಗಳೂರು ಗ್ರಾಮಾಂತರ 1, ಬೆಂಗಳೂರು ನಗರ 6, ಚಿಕ್ಕಮಗಳೂರು 1, ದಕ್ಷಿಣಕನ್ನಡ 2, ಹಾಸನ 2, ಕೋಲಾರ 1, ಉತ್ತರ ಕನ್ನಡ 1  ಸೇರಿದಂತೆ ರಾಜ್ಯದಲ್ಲಿಂದು 17 ಜನ ಸೋಂಕಿತರು ಮೃತಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...