alex Certify BIG BREAKING: 10 ಜಿಲ್ಲೆಗಳಲ್ಲಿ ಕೊರೋನಾ ಶೂನ್ಯ: ಇಲ್ಲಿದೆ ಎಲ್ಲ ಜಿಲ್ಲೆಗಳ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: 10 ಜಿಲ್ಲೆಗಳಲ್ಲಿ ಕೊರೋನಾ ಶೂನ್ಯ: ಇಲ್ಲಿದೆ ಎಲ್ಲ ಜಿಲ್ಲೆಗಳ ವಿವರ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 673 ಜನರಿಗೆ ಸೋಂಕು ತಗುಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 29,62,408 ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿಂದು 1074 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 29,08,622 ಜನ ಗುಣಮುಖರಾಗಿದ್ದಾರೆ. ಇವತ್ತು 13 ಜನ ಸೋಂಕಿತರು ಸಾವನ್ನಪ್ಪಿದ್ದು, ಇದುವರೆಗೆ 37,517 ಜನ ಸೋಂಕಿತರು ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ 16,241 ಸಕ್ರಿಯ ಪ್ರಕರಣಗಳಿದ್ದು, ಇವತ್ತು ಒಂದೇ ದಿನ 1,19,014 ಪರೀಕ್ಷೆ ನಡೆಸಲಾಗಿದೆ. ಪಾಸಿಟಿವಿಟಿ ದರ ಶೇಕಡ 0.56 ರಷ್ಟು ಇದೆ.

ರಾಜಧಾನಿ ಬೆಂಗಳೂರಿನಲ್ಲಿ 214 ಜನರಿಗೆ ಸೋಂಕು ತಗುಲಿದ್ದು, 371 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಮೂವರು ಸೋಂಕಿತರು ಸಾವನ್ನಪ್ಪಿದ್ದಾರೆ. 7211 ಸಕ್ರಿಯ ಪ್ರಕರಣಗಳಿವೆ.

ಜಿಲ್ಲಾವಾರು ಸೋಂಕಿತರ ಮಾಹಿತಿ:

ಬಾಗಲಕೋಟೆ 0, ಬೆಳಗಾವಿ 0, ಬೀದರ್ 0, ಚಿಕ್ಕಬಳ್ಳಾಪುರ 1, ಚಿತ್ರದುರ್ಗ 4, ದಾವಣಗೆರೆ 3, ಧಾರವಾಡ 0, ಗದಗ 0, ಹಾವೇರಿ 0, ಕಲಬುರಗಿ 0, ಕೊಪ್ಪಳ 1, ಮಂಡ್ಯ 4, ರಾಯಚೂರು 0, ರಾಮನಗರ 2, ವಿಜಯಪುರ 0, ಯಾದಗಿರಿ 0, ಬೆಂಗಳೂರು ನಗರ 214, ಚಿಕ್ಕಮಗಳೂರು 35, ದಕ್ಷಿಣಕನ್ನಡ 115, ಹಾಸನ 51, ಕೊಡಗು 31, ಮೈಸೂರು 39, ತುಮಕೂರು 36, ಉಡುಪಿ 75 ಹೊಸ ಪ್ರಕರಣಗಳು ವರದಿಯಾಗಿದೆ.

ಮೃತಪಟ್ಟವರ ಸಂಖ್ಯೆ:

ಬೆಳಗಾವಿ 1, ಬೆಂಗಳೂರು ಗ್ರಾಮಾಂತರ 1, ಬೆಂಗಳೂರು ನಗರ 3, ದಕ್ಷಿಣಕನ್ನಡ 5, ಕೊಡಗು 1, ಶಿವಮೊಗ್ಗ 1, ತುಮಕೂರು 1 ಸೇರಿ ರಾಜ್ಯದಲ್ಲಿ 13 ಜನ ಸೋಂಕಿತರು ಮೃತಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...