alex Certify ಭಾರತದಲ್ಲಿ ಶೀಘ್ರವೇ ಬರಲಿದೆ 5ರಿಂದ 18 ವರ್ಷದವರಿಗೆ ಕೊರೊನಾ ಲಸಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿ ಶೀಘ್ರವೇ ಬರಲಿದೆ 5ರಿಂದ 18 ವರ್ಷದವರಿಗೆ ಕೊರೊನಾ ಲಸಿಕೆ

ಕೊರೊನಾ ವೈರಸ್ ಹೆಚ್ಚುತ್ತಿರುವ ಸೋಂಕಿನ ನಡುವೆ, ಭಾರತದಲ್ಲಿ ಮಕ್ಕಳ ಪಾಲಕರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಹೈದರಾಬಾದ್ ಮೂಲದ ಸ್ಥಳೀಯ ಫಾರ್ಮಾ ಕಂಪನಿ ಬಯೋಲಾಜಿಕಲ್ ಇ ಲಿಮಿಟೆಡ್ ಗೆ ಕೋವಿಡ್ -19 ಲಸಿಕೆಯ ಎರಡನೇ ಮತ್ತು ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಅನುಮತಿ ನೀಡಿದೆ. ಐದರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಸಿದ್ಧವಾಗಿರುವ ಈ ಲಸಿಕೆ ಪ್ರಯೋಗಕ್ಕೆ ಷರತ್ತುಬದ್ಧ ಒಪ್ಪಿಗೆ ನೀಡಲಾಗಿದೆ.

ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ, ಎಸ್‌ಇಸಿ ಶಿಫಾರಸುಗಳ ಆಧಾರದ ಮೇಲೆ 10 ಸ್ಥಳಗಳಲ್ಲಿ ನಡೆಸಲಾಗುವ ಲಸಿಕೆಯ ಪ್ರಯೋಗಕ್ಕೆ ಅನುಮತಿ ನೀಡಿದೆ. ಮಕ್ಕಳ ಮೇಲೆ ಪ್ರಯೋಗ ನಡೆಸಲು ಡಿಸಿಜಿಐನಿಂದ ಅನುಮತಿ ಪಡೆದ ಲಸಿಕೆಯಲ್ಲಿ ಇದು ಭಾರತದ ನಾಲ್ಕನೇ ಲಸಿಕೆಯಾಗಿದೆ.

ಈ ಹಿಂದೆ, ದೇಶದಲ್ಲಿ ಅಭಿವೃದ್ಧಿಪಡಿಸಿದ ಜೈಡಸ್ ಕ್ಯಾಡಿಲಾ ಲಸಿಕೆಯ ತುರ್ತು ಬಳಕೆಗೆ ಡಿಸಿಜಿಐ ಅನುಮೋದನೆ ನೀಡಿತ್ತು. ಇದು ದೇಶದ 12 ರಿಂದ 18 ವರ್ಷ ವಯಸ್ಸಿನವರಿಗೆ ಲಭ್ಯವಿರಲಿದೆ. ಇದಲ್ಲದೆ, 2 ರಿಂದ 17 ವರ್ಷದೊಳಗಿನ ಮಕ್ಕಳಿಗಾಗಿ ಕೋರಮ್ ಆಫ್ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ, ಲಸಿಕೆ ಪ್ರಯೋಗ ನಡೆಸುತ್ತಿದೆ. ಭಾರತ್ ಬಯೋಟೆಕ್‌ನ ಕೋವಾಕ್ಸಿನ್‌ನ ಎರಡನೇ ಮತ್ತು ಮೂರನೇ ಹಂತದ ಪ್ರಯೋಗಗಳು 2 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ನಡೆಯುತ್ತಿದೆ.

ಭಾರತದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಲಸಿಕೆ ನೀಡಲಾಗುತ್ತಿದೆ. ದೇಶಾದ್ಯಂತ 66 ಕೋಟಿ 30 ಲಕ್ಷ 37 ಸಾವಿರದ 334 ಡೋಸ್ ಲಸಿಕೆ ನೀಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...