alex Certify ಲಸಿಕೆ ನಿರೀಕ್ಷೆಯಲ್ಲಿದ್ದವರಿಗೆಲ್ಲ ಇಲ್ಲಿದೆ ಮುಖ್ಯ ಮಾಹಿತಿ: 18 -44 ವರ್ಷದವರಿಗೆ ಇಲ್ಲ –ಗೊಂದಲಗಳಿಗೆ ಸ್ಪಷ್ಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಸಿಕೆ ನಿರೀಕ್ಷೆಯಲ್ಲಿದ್ದವರಿಗೆಲ್ಲ ಇಲ್ಲಿದೆ ಮುಖ್ಯ ಮಾಹಿತಿ: 18 -44 ವರ್ಷದವರಿಗೆ ಇಲ್ಲ –ಗೊಂದಲಗಳಿಗೆ ಸ್ಪಷ್ಟನೆ

ಬೆಂಗಳೂರು: ಕೋವಿಡ್ -19 ಲಸಿಕಾಕರಣ ಕುರಿತು ಸಾರ್ವಜನಿಕರಲ್ಲಿ ಕೆಲವೊಂದು ಗೊಂದಲಗಳಿರುವುದು ಕಂಡುಬಂದ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಸದ್ಯದ ಕೋವಿಡ್ ಲಸಿಕಾಕರಣದ ಕುರಿತು ಸ್ಪಷ್ಟನೆ ನೀಡಲಾಗಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

45 ವರ್ಷ ಮೇಲ್ಪಟ್ಟವರಿಗೆ ಲಸಿಕೆ

ಕೋವಿಶೀಲ್ಡ್ ಮೊದಲನೇ ಡೋಸ್

ನಗರಪ್ರದೇಶದಲ್ಲಿ ಆನ್ಲೈನ್ ಮತ್ತು ಗ್ರಾಮೀಣ ಪ್ರದೇಶದಲ್ಲಿ ಆನ್ ಸೈಟ್ ನೋಂದಣಿಯ ಮೂಲಕ ಲಸಿಕೆ ನೀಡಲಾಗುವುದು

ಕೋವಿಶೀಲ್ಡ್ ಎರಡನೇ ಡೋಸ್

ಎರಡನೇ ಡೋಸ್ ಲಸಿಕೆಯನ್ನು ಸಮೀಪದ ಕೋವಿಡ್-19 ಲಸಿಕಾ ಕೇಂದ್ರಕ್ಕೆ ನೇರವಾಗಿ ತೆರಳಿ ಪಡೆಯಬಹುದಾಗಿದೆ.

ಕೋವ್ಯಾಕ್ಸಿನ್ ಮೊದಲನೇ ಡೋಸ್

ಕೋವ್ಯಾಕ್ಸಿನ್ ಮೊದಲನೇ ಡೋಸ್ ಸದ್ಯಕ್ಕೆ ಲಭ್ಯವಿರುವುದಿಲ್ಲ

ಕೋವ್ಯಾಕ್ಸಿನ್ ಎರಡನೇ ಡೋಸ್

ಎರಡನೇ ಡೋಸ್ ಪಡೆಯಬೇಕಾದ ಫಲಾನುಭವಿಗಳಿಗೆ ಎಸ್ಎಂಎಸ್ ಮೂಲಕ ಮಾಹಿತಿ ಕಳುಹಿಸಲಾಗುವುದು. ಎಸ್ಎಂಎಸ್ ನಲ್ಲಿ ತಿಳಿಸಿದ ಲಸಿಕಾ ಕೇಂದ್ರಕ್ಕೆ ನಿಗದಿತ ಸಮಯಕ್ಕೆ ಫಲಾನುಭವಿಗಳು ಲಸಿಕೆ ಪಡೆಯಬಹುದಾಗಿದೆ ಎಂದು ಹೇಳಲಾಗಿದೆ.

18 ರಿಂದ 44 ವರ್ಷದವರಿಗೆ ಲಸಿಕೆ ಇಲ್ಲ

18 ರಿಂದ 44 ವರ್ಷ ವಯೋಮಾನದವರಿಗೆ ಕೋವಿಡ್ ಲಸಿಕೆ ಸದ್ಯಕ್ಕೆ ಲಭ್ಯವಿರುವುದಿಲ್ಲ. ಆದರೆ, ರಾಜ್ಯ ಗುರುತಿಸಿದ ಕೋವಿಡ್ -19 ಮುಂಚೂಣಿ ಕಾರ್ಯಕರ್ತರಿಗೆ, ದುರ್ಬಲ ಗುಂಪಿನವರಿಗೆ ಮತ್ತು ಆದ್ಯತೆ ಗುಂಪಿನವರಿಗೆ ಆಯಾ ಗುಂಪಿನ ನಿಯೋಜಿತ ನೋಡಲ್ ಅಧಿಕಾರಿಗಳು ಲಸಿಕೆ ದಿನಾಂಕ ಮತ್ತು ಸಮಯದ ಮಾಹಿತಿಯನ್ನು ನೀಡಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...