alex Certify ಡಿಸೆಂಬರ್ ನಿಂದ ಶಾಲೆ, ಪಿಯು ಕಾಲೇಜ್ ಆರಂಭದ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಿಸೆಂಬರ್ ನಿಂದ ಶಾಲೆ, ಪಿಯು ಕಾಲೇಜ್ ಆರಂಭದ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ

ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಶಾಲಾ, ಪಿಯು ಕಾಲೇಜುಗಳನ್ನು ಆರಂಭಿಸಲು ನಿರ್ಧಾರ ಕೈಗೊಂಡಿದೆ.

ಡಿಸೆಂಬರ್ ಅಂತ್ಯದವರೆಗೆ ಪಿಯು ಕಾಲೇಜು ಆರಂಭವಾಗುವುದಿಲ್ಲ. ಸದ್ಯಕ್ಕೆ ಆನ್ಲೈನ್ ಮತ್ತು ಇತರೆ ಮಾಧ್ಯಮಗಳ ಮೂಲಕ ಪಾಠ ನಡೆಸಿ ನಡೆಯಲಿದೆ. ಆರೋಗ್ಯ ಇಲಾಖೆಯ ವರದಿಗೆ ಮನ್ನಣೆ ನೀಡಲಾಗಿದ್ದು, ಶಾಲೆ, ಪಿಯು ಕಾಲೇಜ್  ಪುನರಾರಂಭ ನಿರ್ಧಾರ ಮುಂದೂಡಲಾಗಿದೆ.

ಡಿಸೆಂಬರ್ ಮೂರನೇ ವಾರದಲ್ಲಿ ಮತ್ತೊಮ್ಮೆ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ವಿದ್ಯಾರ್ಥಿಗಳ ಹಿತ ಗಮನಿಸಿ ಶಾಲೆ, ಪಿಯುಸಿ ಕಾಲೇಜುಗಳನ್ನು ಆರಂಭಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಚಳಿಗಾಲದಲ್ಲಿ ಕೊರೋನಾ ಜಾಸ್ತಿಯಾಗಿ ಮಕ್ಕಳಿಗೆ ತೊಂದರೆಯಾಗುವ ಅಭಿಪ್ರಾಯದ ಕಾರಣ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...