alex Certify ರಾಜ್ಯದ ಜನತೆಗೆ ಬೆಚ್ಚಿಬೀಳಿಸುವ ಸುದ್ದಿ: ಬೆಂಗಳೂರಲ್ಲಿ 10497 ಸೇರಿ ದಾಖಲೆಯ 14,738 ಜನರಿಗೆ ಸೋಂಕು, 66 ಮಂದಿ ಸಾವು- ಇಲ್ಲಿದೆ ಜಿಲ್ಲಾವಾರು ಡಿಟೇಲ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದ ಜನತೆಗೆ ಬೆಚ್ಚಿಬೀಳಿಸುವ ಸುದ್ದಿ: ಬೆಂಗಳೂರಲ್ಲಿ 10497 ಸೇರಿ ದಾಖಲೆಯ 14,738 ಜನರಿಗೆ ಸೋಂಕು, 66 ಮಂದಿ ಸಾವು- ಇಲ್ಲಿದೆ ಜಿಲ್ಲಾವಾರು ಡಿಟೇಲ್ಸ್

ಬೆಂಗಳೂರು: ರಾಜ್ಯದಲ್ಲಿ ಇವತ್ತು ಕೊರೋನಾ ಸುನಾಮಿಯೇ ಎದ್ದಿದ್ದು, ಒಂದೇ ದಿನ ದಾಖಲೆಯ 14,738 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 11,09,650 ಕ್ಕೆ ಏರಿಕೆಯಾಗಿದೆ.

ಇವತ್ತು 3591 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 9,99,958 ಜನ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಇವತ್ತು ಒಂದೇ ದಿನ 66 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಇದುವರೆಗೆ ಕೊರೋನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 13,112 ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಬರೋಬ್ಬರಿ 96,561 ಸಕ್ರಿಯ ಪ್ರಕರಣಗಳಿದ್ದು, 555 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಬೆಚ್ಚಿಬೀಳಿಸುವಂತಿದೆ. ಇವತ್ತು ಒಂದೇ ದಿನ 10,497 ಜನರಿಗೆ ಸೋಂಕುತಗುಲಿದ್ದು, 30 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. 71,827 ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಗಳಲ್ಲಿಯೂ ಕೊರೊನಾ ಸೋಂಕು ತೀವ್ರವಾಗಿ ಹೆಚ್ಚಳವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...