alex Certify BIG NEWS: ರಾಜ್ಯದಲ್ಲಿಂದು 1003 ಜನರಿಗೆ ಸೋಂಕು, 18 ಮಂದಿ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಾಜ್ಯದಲ್ಲಿಂದು 1003 ಜನರಿಗೆ ಸೋಂಕು, 18 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1003 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, 18 ಜನ ಸೋಂಕಿತರು ಮೃತಪಟ್ಟಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 29,66,194 ಕ್ಕೆ ಏರಿಕೆಯಾಗಿದೆ. ಇದುವರೆಗೆ 37,573 ಸೋಂಕಿತರು ಮೃತಪಟ್ಟಿದ್ದಾರೆ.

ರಾಜ್ಯದಲ್ಲಿ ಇಂದು 1199 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 29,12,633 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ 15,960 ಸಕ್ರಿಯ ಪ್ರಕರಣಗಳು ಇವೆ. ಪಾಸಿಟಿವಿಟಿ ದರ ಶೇಕಡ 6 ರಷ್ಟು ಇದೆ.

ಬೆಂಗಳೂರಿನಲ್ಲಿ ಇಂದು ಹೊಸದಾಗಿ 310 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. 6 ಜನ ಮೃತಪಟ್ಟಿದ್ದಾರೆ. 276 ಮಂದಿ ಗುಣಮುಖರಾಗಿದ್ದು, 7456 ಸಕ್ರಿಯ ಪ್ರಕರಣಗಳು ಇವೆ.

ಜಿಲ್ಲಾವಾರು ಸೋಂಕಿತರ ಮಾಹಿತಿ:

ಬಾಗಲಕೋಟೆ 0, ಬಳ್ಳಾರಿ 4, ಬೀದರ್ 0, ಚಾಮರಾಜನಗರ 4, ಚಿಕ್ಕಬಳ್ಳಾಪುರ 5, ದಾವಣಗೆರೆ 3, ಗದಗ 1, ಹಾವೇರಿ 0, ಕಲಬುರ್ಗಿ 5, ಕೊಪ್ಪಳ 0, ರಾಯಚೂರು 3, ರಾಮನಗರ 2, ವಿಜಯಪುರ 0, ಯಾದಗಿರಿ 2, ಬೆಂಗಳೂರು 310, ದಕ್ಷಿಣಕನ್ನಡ 124, ಹಾಸನ 48, ಕೊಡಗು 96, ಮೈಸೂರು 46, ತುಮಕೂರು 61, ಉಡುಪಿ 94 ಹೊಸ ಪ್ರಕರಣ ವರದಿಯಾಗಿದೆ.

ಮೃತಪಟ್ಟವರ ಸಂಖ್ಯೆ:

ಬೆಳಗಾವಿ 3, ಬೆಂಗಳೂರು ಗ್ರಾಮಾಂತರ 1, ಬೆಂಗಳೂರು ನಗರ 6, ಚಾಮರಾಜನಗರ 1, ಚಿಕ್ಕಮಗಳೂರು 1, ದಕ್ಷಿಣಕನ್ನಡ 2, ಧಾರವಾಡ 1, ಮೈಸೂರು 1, ರಾಯಚೂರು 1, ಉತ್ತರಕನ್ನಡ 1 ಸೇರಿ ರಾಜ್ಯದಲ್ಲಿ ಇಂದು 18 ಜನ ಸೋಂಕಿತರು ಮೃತಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...