alex Certify BIG NEWS: 7 ಜಿಲ್ಲೆಗಳಲ್ಲಿ ಶೂನ್ಯ, ಸಾವಿನ ಸಂಖ್ಯೆಯೂ ಒಂದಂಕಿಗೆ ಇಳಿಕೆ –ಇಲ್ಲಿದೆ ಜಿಲ್ಲಾವಾರು ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 7 ಜಿಲ್ಲೆಗಳಲ್ಲಿ ಶೂನ್ಯ, ಸಾವಿನ ಸಂಖ್ಯೆಯೂ ಒಂದಂಕಿಗೆ ಇಳಿಕೆ –ಇಲ್ಲಿದೆ ಜಿಲ್ಲಾವಾರು ವಿವರ

ಬೆಂಗಳೂರು: ರಾಜ್ಯದಲ್ಲಿ ಎಂದು 1,117 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 29,55,164 ಕ್ಕೆ ಏರಿಕೆಯಾಗಿದೆ.

ಇಂದು 1354 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 29,00,228 ಜನ ಗುಣಮುಖರಾಗಿದ್ದಾರೆ. ಇದುವರೆಗೆ 37,409 ಸೋಂಕಿತರು ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ ಇವತ್ತು 8 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ಕೊರೋನಾ ಎರಡನೇ ಅಲೆಯ ಆರಂಭದ ನಂತರದಲ್ಲಿ ಮೊದಲ ಬಾರಿಗೆ ದೈನಂದಿನ ಸಾವಿನ ಪ್ರಕರಣ ಒಂದಂಕಿಗೆ ಇಳಿದಿದೆ.

ಇವತ್ತು 1,56,902 ಪರೀಕ್ಷೆ ನಡೆಸಲಾಗಿದ್ದು, ಪಾಸಿಟಿವಿಟಿ ದರ ಶೇಕಡ 0.71 ರಷ್ಟು ಇದೆ. ರಾಜಧಾನಿ ಬೆಂಗಳೂರಿನಲ್ಲಿ ಹೊಸದಾಗಿ 358 ಜನರಿಗೆ ಸೋಂಕು ತಗುಲಿದ್ದು, 530 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 5 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ 7,205 ಸೇರಿದಂತೆ ರಾಜ್ಯದಲ್ಲಿ 17,501 ಸಕ್ರಿಯ ಪ್ರಕರಣಗಳು ಇವೆ.

ಜಿಲ್ಲಾವಾರು ಸೋಂಕಿತರ ವಿವರ:

ಬಾಗಲಕೋಟೆ 0, ಬಳ್ಳಾರಿ 2, ಬೆಂಗಳೂರು ಗ್ರಾಮಾಂತರ 7, ಬೀದರ್ 0, ಚಾಮರಾಜನಗರ 2, ಚಿಕ್ಕಬಳ್ಳಾಪುರ 4, ಚಿತ್ರದುರ್ಗ 4, ಧಾರವಾಡ 5, ಗದಗ 0, ಹಾವೇರಿ 0, ಕಲಬುರ್ಗಿ 4, ಕೊಪ್ಪಳ 5, ರಾಯಚೂರು 0, ರಾಮನಗರ 0, ವಿಜಯಪುರ 0, ಯಾದಗಿರಿ 0 ಪ್ರಕರಣ ವರದಿಯಾಗಿದೆ.

ಬೆಂಗಳೂರು ನಗರ 358, ದಕ್ಷಿಣಕನ್ನಡ 183, ಹಾಸನ 48, ಕೊಡಗು 62, ಮೈಸೂರು 59, ಶಿವಮೊಗ್ಗ 48, ಉಡುಪಿ 130, ಉತ್ತರಕನ್ನಡ 47 ಹೊಸ ಪ್ರಕರಣ ವರದಿಯಾಗಿದೆ.

ಮೃತಪಟ್ಟವರ ಸಂಖ್ಯೆ:

ಬೆಳಗಾವಿ 1, ಬೆಂಗಳೂರು ನಗರ 5, ದಕ್ಷಿಣ ಕನ್ನಡ 1, ಮೈಸೂರು 1 ಸೇರಿದ ರಾಜ್ಯದಲ್ಲಿ ಇಂದು 8 ಸೋಂಕಿತರು ಮೃತಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...