ಬೆಂಗಳೂರು: ರಾಜ್ಯದಲ್ಲಿ ಕೊರೋನಾ 2 -3 ದಿನಗಳಿಗೊಮ್ಮೆ ಕೊರೋನಾ ಪ್ರಮಾಣ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಠಿಣ ನಿರ್ಬಂಧ ಜಾರಿಗೊಳಿಸುವ ಸಾಧ್ಯತೆ ದಟ್ಟವಾಗಿದೆ.
ಡಿಸೆಂಬರ್ 27 -289
ಡಿಸೆಂಬರ್ 28 -356
ಡಿಸೆಂಬರ್ 29 -566
ಡಿಸೆಂಬರ್ 30 -707
ಡಿಸೆಂಬರ್ 31 -832
ಜನವರಿ 1 -1033
ಜನವರಿ 2 -1187
ಜನವರಿ 3 -1290
ಜನವರಿ 4 -2479
ಹೀಗೆ ಎರಡು ಮೂರು ದಿನಗಳಿಗೊಮ್ಮೆ ಕೊರೊನಾ ಸೋಂಕು ದ್ವಿಗುಣವಾಗುತ್ತಿದೆ. ಎರಡು ಮೂರು ದಿನಗಳಿಂದ ಒಂದು ಸಾವಿರ ಆಸುಪಾಸಿನಲ್ಲಿದ್ದ ಕೇಸ್ ಗಳು ಇಂದು ಸುಮಾರು ಎರಡೂವರೆ ಸಾವಿರದ ಸನಿಹಕ್ಕೆ ಬಂದಿದೆ. ಪಾಸಿಟಿವಿಟಿ ದರ ಕೂಡ ಡಬಲ್ ಆಗಿರುವುದು ಆತಂಕಕ್ಕೆ ಕಾರಣವಾಗಿದ್ದು, ಸೋಂಕಿನ ಏರಿಕೆ ಗಮನಿಸಿದಾಗ ಕಠಿಣ ನಿರ್ಬಂಧ ಜಾರಿ ಮಾಡುವುದು ಬಹುತೇಕ ಖಚಿತವೆನ್ನಲಾಗಿದೆ.