alex Certify BIG NEWS: ಬೆಂಗಳೂರಿಗಿಂತ ದಕ್ಷಿಣ ಕನ್ನಡದಲ್ಲೇ ಅಧಿಕ ಸೋಂಕಿತರು ಪತ್ತೆ, ಇಲ್ಲಿದೆ ಎಲ್ಲ ಜಿಲ್ಲೆಗಳ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬೆಂಗಳೂರಿಗಿಂತ ದಕ್ಷಿಣ ಕನ್ನಡದಲ್ಲೇ ಅಧಿಕ ಸೋಂಕಿತರು ಪತ್ತೆ, ಇಲ್ಲಿದೆ ಎಲ್ಲ ಜಿಲ್ಲೆಗಳ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು 1338 ಜನರಿಗೆ ಸೋಂಕು ತಗುಲಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 29,21,049 ಕ್ಕೆ ಏರಿಕೆಯಾಗಿದೆ,.

ಇಂದು 31 ಸೋಂಕಿತರು ಸಾವನ್ನಪ್ಪಿದ್ದಾರೆ. ಇದುವರೆಗೆ 36,848 ಮಂದಿ ಮೃತಪಟ್ಟಿದ್ದಾರೆ. 1947 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 28,61,499 ಜನ ಗುಣಮುಖರಾಗಿದ್ದಾರೆ. 22,676 ಸಕ್ರಿಯ ಪ್ರಕರಣಗಳು ಇವೆ. ಪಾಸಿಟಿವಿಟಿ ದರ ಶೇಕಡ 1.05 ರಷ್ಟು ಇದೆ. ಇವತ್ತು 1,26,400 ಪರೀಕ್ಷೆ ನಡೆಸಲಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ 315 ಜನರಿಗೆ ಹೊಸದಾಗಿ ಸೋಂಕು ತಗುಲಿದೆ. 492 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಮೂವರು ಸೋಂಕಿತರು ಮೃತಪಟ್ಟಿದ್ದಾರೆ. 8,198 ಸಕ್ರಿಯ ಪ್ರಕರಣಗಳು ಇವೆ.

ಜಿಲ್ಲೆಗಳಲ್ಲಿ ಪತ್ತೆಯಾದ ಪ್ರಕರಣಗಳ ಸಂಖ್ಯೆ:

ದಕ್ಷಿಣಕನ್ನಡ 378, ಬೆಂಗಳೂರು ನಗರ 315, ಮೈಸೂರು 71, ಉಡುಪಿ 92, ಉತ್ತರಕನ್ನಡ 61, ಕೊಡಗು 50, ಹಾಸನ 47, ಚಿಕ್ಕಮಗಳೂರು 93, ಶಿವಮೊಗ್ಗ 48 ಜನರಿಗೆ ಸೋಂಕು ತಗುಲಿದೆ.

ಯಾದಗಿರಿ 0, ವಿಜಯಪುರ 3, ರಾಮನಗರ 6, ರಾಯಚೂರು 1, ಕೊಪ್ಪಳ 3, ಕಲಬುರಗಿ 5, ಹಾವೇರಿ 5, ಗದಗ 0, ದಾವಣಗೆರೆ 7, ಚಿಕ್ಕಬಳ್ಳಾಪುರ 6, ಬೀದರ್ 5, ಬಳ್ಳಾರಿ 3 ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ.

ಮೃತಪಟ್ಟ ಸೋಂಕಿತರ ಸಂಖ್ಯೆ:

ಬೆಳಗಾವಿ 1, ಬೆಂಗಳೂರು ಗ್ರಾಮಾಂತರ 1, ಬೆಂಗಳೂರು ನಗರ 3, ಚಿತ್ರದುರ್ಗ 1, ದಕ್ಷಿಣಕನ್ನಡ 8, ಧಾರವಾಡ 1, ಹಾಸನ 3, ಕೊಡಗು 1, ಕೋಲಾರ 2, ಕೊಪ್ಪಳ 1, ಮಂಡ್ಯ 1, ಮೈಸೂರು 2, ತುಮಕೂರು 1, ಉಡುಪಿ 1, ಉತ್ತರಕನ್ನಡ 4 ಜನ ಸೇರಿದಂತೆ 31 ಸೋಂಕಿತರು ಮೃತಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...