ರಾಜಕಾರಣದಲ್ಲಿ ದೊಡ್ಡ ಹುದ್ದೆಗಳು ಬಂದ ಮೇಲೂ ತಾವು ಬೆಳೆದು ಬಂದ ಹಾದಿಯನ್ನು ಮರೆಯದೇ ಇರುವ ಮಂದಿ ಬಹಳ ಅಪರೂಪಕ್ಕೆ ಸಿಗುತ್ತಾರೆ.
ಮಹಾರಾಷ್ಟ್ರದ ಚಾಂದ್ ಶಾ ಇಂಥವರಲ್ಲಿ ಒಬ್ಬರು. ವಾಶಿಮ್ ಜಿಲ್ಲೆಯಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆದ್ದ ಬಳಿಕವೂ ರಸ್ತೆ ಬದಿಯಲ್ಲಿ ಜೋಳ ಮಾರುವ ತಮ್ಮ ಕೆಲಸ ಮುಂದುವರೆಸಿದ್ದಾರೆ ಶಾ. ಚುನಾವಣೆ ಎದುರಿಸಲು ತಮ್ಮಲ್ಲಿ ದುಡ್ಡಿನ ಕೊರತೆ ಇದ್ದರೂ ಸಹ ಜನರ ವಿಶ್ವಾಸದಿಂದಲೇ ಗೆದ್ದು ಬಂದಿದ್ದಾರೆ ಶಾ.
ಅಪರೂಪದ ಕಣ್ಣಿನ ಕಾಯಿಲೆಯಿಂದ ಬಾಲಕಿ ಪಾರು ಮಾಡಿದ ವೈದ್ಯರು
ಕೌನ್ಸಿಲರ್ ಹುದ್ದೆಗೇರಿದ ಬಳಿಕವೂ ತಮ್ಮ ಹಿಂದಿನ ಕೆಲಸವನ್ನು ಬಿಡದ ಶಾ, ಇಲ್ಲಿನ ಕರಂಜಾ ಪಟ್ಟಣದಲ್ಲಿ ಸುಟ್ಟ ಜೋಳ ಮಾರುವ ತಮ್ಮ ಕೆಲಸ ಮುಂದುವರೆಸಿದ್ದಾರೆ.
“ಕಳೆದ 10 ವರ್ಷಗಳಿಂದ ನಾನು ಜೋಳ ಮಾರುತ್ತಿದ್ದೇನೆ. ಈ ಕೆಲಸದಿಂದ ಪ್ರತಿನಿತ್ಯ 200-300 ರೂಪಾಯಿ ಸಂಪಾದಿಸುತ್ತೇನೆ. ಚುನಾವಣೆಯಲ್ಲಿ ಸ್ಫರ್ಧಿಸಲು ಜನರು ನನಗೆ ಬೆಂಬಲ ಕೊಟ್ಟಿದ್ದು, ಕೌನ್ಸಿಲರ್ ಆಗಿ ನಾನು ಮುಂದುವರೆಯಬೇಕೆಂದು ಬಯಸಿದ್ದಾರೆ” ಎಂದು ಶಾ ತಿಳಿಸುತ್ತಾರೆ.