ಕಾರ್ನ್ ಫ್ಲೋರ್ ಇದು ಮೆಕ್ಕೆ ಜೋಳದಿಂದ ತಯಾರಿಸಿದ ಬಿಳಿ ಬಣ್ಣದ ಹಿಟ್ಟು. ಇದನ್ನು ಚೈನೀಸ್ ಫುಡ್ ಗಳಲ್ಲಿ ಬಳಸುತ್ತಾರೆ. ಇದನ್ನು ಮುಖಕ್ಕೆ ಬಳಸಿದರೆ ಚರ್ಮದ ಆರೋಗ್ಯವನ್ನು ಕಾಪಾಡಬಹುದು. ಹಾಗಾಗಿ ಕಾರ್ನ್ ಫ್ಲೋರ್ ಬಳಸಿ ಫೇಸ್ ಪ್ಯಾಕ್ ತಯಾರಿಸಿ ಹಚ್ಚಿ.
2 ಚಮಚ ಕಾರ್ನ್ ಫ್ಲೋರ್, 3 ಚಮಚ ಹಾಲು, 1 ಚಮಚ ಜೇನುತುಪ್ಪ, 1 ಚಮಚ ಕಲ್ಲುಸಕ್ಕರೆ, ಇವಿಷ್ಟನ್ನು ಸೇರಿಸಿ ಪ್ಯಾಕ್ ತಯಾರಿಸಿ ಇದನ್ನು ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ಒಣಗಿದ ಬಳಿಕ ಸ್ವಲ್ಪ ನೀರಿನಿಂದ ತೇವಗೊಳಿಸಿ ಕೈಗಳಿಂದ ಮುಖದ ಮೇಲೆ ಮಸಾಜ್ ಮಾಡಿ. ಬಳಿಕ ವಾಶ್ ಮಾಡಿ. ಇದನ್ನು ವಾರಕ್ಕೊಮ್ಮೆ ಬಳಸಿ.
ಇದರಿಂದ ಮುಖದಲ್ಲಿರುವ ಕಲೆಗಳು ನಿವಾರಣೆಯಾಗುತ್ತದೆ. ಮುಖವು ಬಿಳಿಯಾಗುತ್ತದೆ. ಇದು ಎಣ್ಣೆಯುಕ್ತ ಚರ್ಮವನ್ನು ನಿವಾರಿಸಿ ಮೊಡವೆಗಳನ್ನು ನಿವಾರಿಸುತ್ತದೆ. ಇದು ಚರ್ಮವನ್ನು ಶುದ್ಧೀಕರಿಸುತ್ತದೆ.