ಡಬಲ್ ಡೆಕ್ಕರ್ ಬಸ್ ಗಾತ್ರದ ಹವಳಗುಚ್ಛವೊಂದು ಆಸ್ಟ್ರೇಲಿಯಾದ ಗ್ರೇಟ್ ಬ್ಯಾರಿಯರ್ ರೀಫ್ ಬಳಿ ಕ್ವೀನ್ಸ್‌ಲೆಂಡ್ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.
5.3 ಮೀಟರ್ ಎತ್ತರ ಹಾಗೂ 10.5 ಮೀಟರ್ ಅಗಲವಿರುವ ಈ ಹವಳಗುಚ್ಛವು ಗ್ರೇಟ್ ಬ್ಯಾರಿಯರ್ ರೀಫ್ ನಲ್ಲಿ ಪತ್ತೆಯಾದ ಅತಿ ದೊಡ್ಡ ಗುಚ್ಛವಾಗಿದೆ. ಇಲ್ಲಿನ ಪಾಮ್ ದ್ವೀಪದಲ್ಲಿ ವಾಸಿಸುವ ಮಾನ್ಬರ‍್ರಾ ಬುಡಕಟ್ಟು ಜನಾಂಗವು ಈ ಹವಳಗುಚ್ಛವನ್ನು ’ಮುಗಾ ಧಾಂಬಿ’ (ದೊಡ್ಡ ಹವಳ) ಎಂಬ ಹೆಸರಿನಿಂದ ಕರೆಯುತ್ತಾರೆ.
ಕಲೆಕ್ಷನ್ ಏಜೆಂಟ್‌ನಿಂದ ಲಕ್ಷಾಂತರ ರೂ. ದೋಚಿದ ಡಕಾಯಿತರು, ಕರ್ತವ್ಯ ನಿರ್ಲಕ್ಷ್ಯಕ್ಕೆ ಪೊಲೀಸ್ ಅಧಿಕಾರಿ ಸಸ್ಪೆಂಡ್
ಸಮುದ್ರದ ಮೇಲ್ಮೈ ತಾಪಮಾನ ಹಾಗೂ ಹವಳಗಳ ಬೆಳವಣಿಗೆಯ ಸರಾಸರಿಗಳನ್ನು ಲೆಕ್ಕಾಚಾರ ಮಾಡಿ, ಈ ಹವಳವು 421-438 ವರ್ಷಗಳಷ್ಟು ಹಳೆಯದಾಗಿದೆ ಎಂದು ಅಂದಾಜಿಸಲಾಗಿದೆ.
ಕೆಳಮಟ್ಟದ ಅಲೆಗಳು, ಹವಳದ ಬ್ಲೀಚಿಂಗ್, ದಾಳಿಯಿಡುವ ಜೀವಿಗಳು, 80 ಚಂಡಮಾರುತಗಳನ್ನೆಲ್ಲಾ ಮೆಟ್ಟಿ ನಿಂತ ಈ ಹವಳಗುಚ್ಛ, ಪುಟಾಣಿ ಜಲಚರಗಳು, ಕ್ಯಾಲ್ಷಿಯಂ ಕಾರ್ಬೋನೇಟ್‌ಗಳಿಂದ ಮಾಡಲ್ಪಟ್ಟಿದ್ದು, 70%ನಷ್ಟು ಜೀವಂತಿಕೆಯಿಂದ ಆರೋಗ್ಯಪೂರ್ಣವಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.