ಮೊಸರು ಆರೋಗ್ಯಕ್ಕೆ ಉತ್ತಮ. ಇದರಲ್ಲಿರುವ ರಾಸಾಯನಿಕ ಹಾಲಿಗಿಂತ ಮೊದಲು ಜೀರ್ಣವಾಗುವ ಶಕ್ತಿ ಹೊಂದಿದೆ. ಅದಕ್ಕೆ ಎಲ್ಲ ಬಗೆಯ ರೋಗಗಳನ್ನು ಗುಣಪಡಿಸುವ ಶಕ್ತಿ ಇದೆ. ಬನ್ನಿ ಹಾಗಾದ್ರೆ ಮೊಸರಿನ ಉಪಯೋಗಗಳೇನು ಎಂಬುದನ್ನು ತಿಳಿಯೋಣ.
ಪಚನ ಶಕ್ತಿ : ಮೊಸರು ರಕ್ತಸ್ರಾವವನ್ನು ಕಡಿಮೆ ಮಾಡುವ ಗುಣ ಹೊಂದಿದೆ. ದೌರ್ಬಲ್ಯವನ್ನು ಕಡಿಮೆ ಮಾಡುತ್ತದೆ.
ಹಾಲು ಮೊಸರಿನ ರೂಪ ಪಡೆದಾಗ ಅದರಲ್ಲಿರುವ ಸಕ್ಕರೆ ಆಮ್ಲ ರೂಪ ಪಡೆಯುತ್ತದೆ. ಇದರಿಂದ ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ. ಯಾರಿಗೆ ಕಡಿಮೆ ಹಸಿವಾಗುತ್ತದೆಯೋ ಅವರು ಮೊಸರು ಸೇವಿಸುವುದು ಒಳ್ಳೆಯದು.
ಹೊಟ್ಟೆಯ ಶಾಖ : ಮೊಸರನ್ನು ಮಜ್ಜಿಗೆ ಮಾಡಿ ಅಥವಾ ಲಸ್ಸಿ ಮಾಡಿ ಕುಡಿಯುವುದರಿಂದ ಹೊಟ್ಟೆಯಲ್ಲಿನ ಶಾಖ ಕಡಿಮೆಯಾಗುತ್ತದೆ. ಹೊಟ್ಟೆ ನೋಯುತ್ತಿದ್ದು, ಅನೇಕ ಬಾರಿ ಶೌಚಾಲಯಕ್ಕೆ ಹೋಗಬೇಕೆನಿಸಿದರೆ ಮೊಸರಿಗೆ ಇಸಬ್ ಗೋಲ್ ಹಾಕಿ ಕುಡಿಯಬೇಕು. ಮೊಸರಿನ ಜೊತೆ ಅಕ್ಕಿ ಸೇರಿಸಿ ತಿನ್ನುವುದರಿಂದಲೂ ಅತಿಸಾರ ಕಡಿಮೆಯಾಗುತ್ತದೆ. ಹೊಟ್ಟೆಯ ಇತರ ಖಾಯಿಲೆಗಳಿಗೂ ಮಜ್ಜಿಗೆ ಜೊತೆ ಉಪ್ಪು ಸೇರಿಸಿ ಕುಡಿಯುವುದು ಒಳ್ಳೆಯದು.
ಹೃದಯ ಖಾಯಿಲೆ : ಮೊಸರು ಸೇವಿಸುವುದರಿಂದ ಹೃದಯ ಸಂಬಂಧಿ ಖಾಯಿಲೆ ಗುಣವಾಗುತ್ತದೆ. ರಕ್ತದೊತ್ತಡ, ಮೂತ್ರಪಿಂಡ ಖಾಯಿಲೆಗಳನ್ನು ಹೋಗಲಾಡಿಸುವ ಶಕ್ತಿ ಮೊಸರಿಗಿದೆ. ಕೊಲೆಸ್ಟ್ರಾಲ್ ಹೆಚ್ಚಾಗುವುದನ್ನು ತಡೆಯುವುದಲ್ಲದೇ, ಹೃದಯ ಬಡಿತವನ್ನು ನಿಯಂತ್ರಿಸುತ್ತದೆ.
ಮೂಳೆಗಳನ್ನು ಗಟ್ಟಿಮಾಡುವ ಗುಣ : ಮೊಸರಿನಲ್ಲಿ ಹೆಚ್ಚಿಗೆ ಪ್ರಮಾಣದಲ್ಲಿ ಕ್ಯಾಲ್ಸಿಯಂ ಇರುವುದರಿಂದ ಮೂಳೆಗಳು ಗಟ್ಟಿಯಾಗುತ್ತವೆ. ಸ್ನಾಯುಗಳು ಸರಿಯಾಗಿ ಕೆಲಸ ಮಾಡುತ್ತವೆ.
ಕೀಲು ನೋವು : ಇಂಗಿನ ಜೊತೆ ಮಜ್ಜಿಗೆ ಬೆರೆಸಿ ಕುಡಿಯುವುದರಿಂದ ಕೀಲು ನೋವು ನಿಯಂತ್ರಣಕ್ಕೆ ಬರುತ್ತದೆ. ಇದರ ಜೊತೆಗೆ ಪೌಷ್ಠಿಕಾಂಶ ನಮ್ಮ ದೇಹ ಸೇರುತ್ತದೆ.
ಮೂಲವ್ಯಾಧಿ : ಮೂಲವ್ಯಾಧಿಯಿಂದ ಬಳಲುವವರು ಊಟದ ನಂತರ ಪಾರ್ಸ್ಲಿ ಜೊತೆ ಮಜ್ಜಿಗೆ ಸೇವಿಸಿದರೆ ಒಳ್ಳೆಯದು.